ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಜಾನಪದ ಸಾಹಿತ್ಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತು.
ಪ್ರಸಿದ್ಧ ಭಾಗವತ ಅನಂತ ಹೆಗಡೆ ದಂತಳಿಗೆ ಅವರು ಯಕ್ಷಗಾನದ ಕುರಿತು ಉಪನ್ಯಾಸ ನೀಡಿದರು. ಯಕ್ಷಗಾನ ಕಲೆ ಬೆಳೆದು ಬಂದ ಬಗೆ, ಅದರ ಹಿನ್ನೆಲೆ ಹಾಗೂ ಕಲೆಯ ವಿಶೇಷತೆಗಳ ಬಗ್ಗೆ ವಿವರಿಸಿದರು.
ನ್ಯಾಯವಾದಿ ಜಯರಾಮ ಸಿದ್ದಿ ಮಾಗೋಡ ಅವರು ಸಿದ್ದಿ ಸಮುದಾಯದ ಸಂಸ್ಕೃತಿ, ಕಲೆಗಳ ಕುರಿತು ಉಪನ್ಯಾಸ ನೀಡಿದರು. ಸಂಪನ್ಮೂಲ ವ್ಯಕ್ತಿಗಳಿಬ್ಬರೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಪ್ರಾಂಶುಪಾಲ ಡಿ.ಎಸ್.ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕರಾದ ಡಾ.ಎಚ್.ಎಚ್.ಕುರಿ, ಸವಿತಾ ನಾಯ್ಕ, ಎನ್‌ಎಸ್ಎಸ್ ಕಾರ್ಯಕ್ರಮಾಧಿಕಾರಿ ರಾಮಕೃಷ್ಣ ಗೌಡ, ವಿದ್ಯಾರ್ಥಿಗಳಾದ ಆಶಾ ಬೆಳ್ಳೆನ್ನವರ್, ದೀಪಕ ಭಟ್ಟ ಕುಂಕಿ ಇತರರಿದ್ದರು.