ಜಗಳ ಬಗೆಹರಿಸಲು ಬಂದ ಪೊಲೀಸರ 122 ವಾಹನವನ್ನೇ ಚಲಾಯಿಸಿಕೊಂಡು ಪರಾರಿ:ಸಿನಿಮೀಯ ರೀತಿಯಲ್ಲಿ ಹಿಡಿದ ಖಾಕಿ

ತುಮಕೂರು, (ನವೆಂಬರ್ 21): ಪೊಲೀಸ್ ವಾಹನ 112ಸಮೇತ ಪರಾರಿಯಾಗಲು ಯತ್ನಿಸಿದ ಕಿಡಿಗೇಡಿಯನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಹಿಡಿದಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ (ನವೆಂಬರ್ 20) ತಡರಾತ್ರಿ ನಾರಾನಹಳ್ಳಿಗೆ ಗ್ರಾಮದಲ್ಲಿ ಮುನಿಯ ಎನ್ನುವಾತ ತನ್ನ ಅಣ್ಣನ ಜೊತೆ ಗಲಾಟೆ ಮಾಡಿದ್ದಾನೆ. ಆಗ ಮುನಿಯನ ಸಹೋದರ 112 ಸಂಖ್ಯೆಗೆ ಕರೆ ಮಾಡಿದ್ದ. ಅದರಂತೆ ಪೋಲಿಸರ 112 ವಾಹನ ಸ್ಥಳಕ್ಕೆ ಗ್ರಾಮಕ್ಕೆ ಬಂದಿದೆ. ಆ ವೇಳೆ ಮುನಿಯ ಪೊಲೀಸರ 122​ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಸತತ 3 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ವಾಹನದ ಜೊತೆಗೆ ಮುನಿಯನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ ತಡರಾತ್ರಿ ಗ್ರಾಮದ ಸಹೋದರಿಬ್ಬರ ನಡುವೆ ಗಲಾಟೆ ಆಗಿದ್ದರಿಂದ 122ಕ್ಕೆ ಕರೆ ಮಾಡಲಾಗಿದೆ. ಕೂಡಲೇ ಪೋಲಿಸರು ಸ್ಥಳಕ್ಕಾಗಮಿಸಿದ್ದಾರೆ. ಈ ವೇಳೆ ಮುನಿಯ 112 ವಾಹನದ ಹಿಂಬದಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಅದನ್ನು 112 ಚಾಲಕ ಏನಾಯ್ತು ಎಂದು ವಾಹನ ಹಿಂಬದಿಗೆ ನೋಡಲು ಹೋಗಿದ್ದಾನೆ. ಆಗ ಮುನಿಯ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದಾನೆ.

ಇದರಿಂದ ಕಂಗಾಲಾದ ಪೊಲೀಸರು ಸತತ ಮೂರು ಗಂಟೆಗಳ ಕಾಲ ಹುಡುಕಾಟ ನಡೆಸಿದ ಬಳಿಕ ತುಮಕೂರು ತಾಲೂಕಿನ ಹೆಬ್ಬೂರು ಬಳಿ 122 ವಾಹನ ಪತ್ತೆಯಾಗಿದೆ. ಬಳಿಕ ಪೊಲೀಸರು ನಿಟ್ಟುಸಿರುಬಿಟ್ಟಿದ್ದು, ಸದ್ಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುನಿಯ ಮದ್ಯ ವ್ಯಸನಿ ಎಂದು ತಿಳಿದುಬಂದಿದೆ.