ಕೋಲಾರ, ನವೆಂಬರ್ 20: ರಸ್ತೆ ಅಪಘಾತದಲ್ಲಿ ನಿವೃತ್ತಿಯ ಅಂಚಿನಲ್ಲಿದ್ದ ಬೆಮೆಲ್ ಹಿರಿಯ ಅಧಿಕಾರಿ ಸಾವಿಗೀಡಾಗಿದ್ದಾರೆ. ಬೆಮೆಲ್ ಅಧಿಕಾರಿ ಸವಾರಿ ಮಾಡುತ್ತಿದ್ದ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಬೆಮೆಲ್ ಕಾರ್ಖಾನೆ ಎದುರೇ ಈ ದುರ್ಘಟನೆ ನಡೆದಿದೆ.
ಮೃತ ಓಂ ಪ್ರಕಾಶ್ (58) ಕೆಜಿಎಫ್ ಘಟಕದ ಬಿಇಎಂಎಲ್ ಕಾರ್ಖಾನೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿದ್ದರು. ಮನೆಯಲ್ಲಿ ಊಟ ಮುಗಿಸಿ ಕಚೇರಿಗೆ ವಾಪಸ್ ಆದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಡಿಜಿಎಂ ಓಂ ಪ್ರಕಾಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.