ಫಲಿಸಲಿಲ್ಲ ಕೋಟ್ಯಾಂತರ ಭಾರತೀಯರ ಕನಸು. ಅದೆಷ್ಟೋ ನಿರೀಕ್ಷೆಗಳೊಂದಿಗೆ ಫೈನಲ್ ಪ್ರವೇಶಿಸಿದ್ದ ಭಾರತ ತಂಡಕ್ಕೆ ಸೋಲಿನ ಅನುಭವವಾಗಿದೆ. ಸತತ ಗೆಲುವಿನೊಂದಿಗೆ ಫೈನಲ್ಗೆ ಲಗ್ಗೆ ಇಟ್ಟ ತಂಡವನ್ನು ನೋಡಿ ಖಂಡಿತಾ ಭಾರತ ಈ ಬಾರಿ ವಿಶ್ವಕಪ್ಗೆ ಮುತ್ತಿಕ್ಕಲಿದೆ ಎಂಬುದು ಎಲ್ಲರ ಆಶಯವಾಗಿತ್ತು. ಆದರೆ ಎಲ್ಲಾ ಆಸೆ ಕಮರಿಹೋಯಿತು.
ಇತ್ತ ವಿಶ್ವಕಪ್ ಕೈಜಾರಿದ ದುಃಖ ಒಂದೆಡೆಯಾದರೆ, ಆಟಗಾರರ ಭಾವನೆಗಳು ಅಭಿಮಾನಿಗಳನ್ನು ಮತ್ತಷ್ಟು ದುಃಖಕ್ಕೆ ತಳ್ಳಿತು. ಮೈದಾನದಲ್ಲಿ ನಮ್ಮ ಆಟಗಾರರನ್ನು ಹೀಗೆ ನೋಡೋದೆ ಕಷ್ಟವಾಯಿತು. ಸ್ಟಾರ್ ಆಟಗಾರರಾದ ನಾಯಕ ರೋಹಿತ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಗೆ ಮೊಹಮ್ಮದ ಸಿರಾಜ್ ಮೈದಾನದಲ್ಲಿ ಕಣ್ಣೀರು ಹಾಕಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲರ ದುಃಖ ಮತ್ತಷ್ಟು ಏರಿತು.
ಮೈದಾನದಲ್ಲಿ ಮಂಡಿಯೂರಿ ಕುಳಿತ ಚಿತ್ರಗಳು ನೋಡುಗರ ಮನಸ್ಸನ್ನು ತಾಕಿದೆ. ಪತಿಯನ್ನು ಅನುಷ್ಕಾ ಶರ್ಮಾ ಸಂತೈಸುತ್ತಿರುವ ದೃಶ್ಯವೂ ಹೃದಯ ತುಂಬಿ ಬಂತು.