ಬೆಂಗಳೂರು, ನವೆಂಬರ್ 20: ಪ್ರತಿಷ್ಠಿತ ಡಾ. ರಾಜ್ 6 ನೇ ಅವೃತ್ತಿ ಕ್ರಿಕೆಟ್ಗಾಗಿ ಕೌಂಟ್ ಡೌನ್ ಹಿನ್ನೆಲೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ತಂಡಗಳಿಗೆ ಕರ್ನಾಟಕ ಸರ್ಕಾರ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಅವರು ಕ್ರಿಕೆಟ್ ಕಿಟ್ ಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಂಗಾಣದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ELV ಲಯನ್ಸ್, GLR ಮಯೂರ ರಾಯಲ್ಸ್, ರುಚಿರ ರೇಂಜರ್ಸ್ ತಂಡಗಳ ಸೆಲೆಬ್ರಿಟಿ ನಾಯಕರು, ಆಟಗಾರರಿಗೆ ಕ್ರಿಕೆಟ್ ಕಿಟ್ ಗಳನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ GLR ತಂಡದ ಮಾಲೀಕರಾದ ಎಲ್. ರಾಜೇಶ್, ELV ಲಯನ್ಸ್ ಮಾಲೀಕರಾದ ಭಾಸ್ಕರ್, ನಟರಾದ ಡಾರ್ಲಿಂಗ್ ಕೃಷ್ಣ, ಧರ್ಮ ಕೀರ್ತಿ ರಾಜ್, ಅರುಣ್ ಬಚ್ಚನ್, ನಿರ್ದೇಶಕ ಪವನ್ ಒಡೆಯರ್ ಮತ್ತಿತರರು ಭಾಗವಹಿಸಿದ್ದರು. ವಿಶೇಷವಾಗಿ ಈ ಬಾರಿಯ ಡಾ ರಾಜ್ ಕಪ್ ನಾಲ್ಕು ದೇಶಗಳಲ್ಲಿ(ಸಿಂಗಾಪುರ್, ಮಸ್ಕಟ್, ಶ್ರೀಲಂಕಾ, ಮಲೇಶಿಯ) ನಡೆಯಲಿದ್ದು ಸ್ಯಾಂಡ್ ವುಡ್ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹರಡಲಿದೆ.