ಏಕದಿನ ವಿಶ್ವಕಪ್ 2023 ಫೈನಲ್ ಫೈಟ್ಗಾಗಿ ಕ್ಷಣಗಣನೆ ಶುರುವಾಗಿದೆ. ನಾಳೆ (ನ.19) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಕಣಕ್ಕಿಳಿಯಲಿದೆ. ಇತ್ತ ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ ಈ ಬಾರಿ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ಅತ್ತ ಆಸ್ಟ್ರೇಲಿಯಾ ತಂಡವು ಗೆಲುವಿಗಾಗಿ ವಿಶೇಷ ರಣತಂತ್ರ ರೂಪಿಸುತ್ತಿದೆ.
ಈ ರಣತಂತ್ರದಲ್ಲಿ ವಿರಾಟ್ ಕೊಹ್ಲಿಗಾಗಿಯೇ ಚಕ್ರವ್ಯೂಹ ಸಿದ್ಧಪಡಿಸುತ್ತಿರುವುದಂತು ಸುಳ್ಳಲ್ಲ. ಏಕೆಂದರೆ ಆಸ್ಟ್ರೇಲಿಯಾ ಪಾಲಿಗೆ ಕಿಂಗ್ ಕೊಹ್ಲಿ ವಿಕೆಟ್ ನಿರ್ಣಾಯಕ. ಇದಕ್ಕೆ ಸಾಕ್ಷಿಯೇ ಆಸೀಸ್ ವಿರುದ್ಧ ವಿರಾಟ್ ಕೊಹ್ಲಿಯ ಪ್ರದರ್ಶನ.
ಲೀಗ್ ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಕೇವಲ 2 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಆಸರೆಯಾಗಿದ್ದು ವಿರಾಟ್ ಕೊಹ್ಲಿ. ಕೆಎಲ್ ರಾಹುಲ್ ಜೊತೆಗೂಡಿದ ಕೊಹ್ಲಿ 165 ರನ್ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು.
ಈ ರಣತಂತ್ರದಲ್ಲಿ ವಿರಾಟ್ ಕೊಹ್ಲಿಗಾಗಿಯೇ ಚಕ್ರವ್ಯೂಹ ಸಿದ್ಧಪಡಿಸುತ್ತಿರುವುದಂತು ಸುಳ್ಳಲ್ಲ. ಏಕೆಂದರೆ ಆಸ್ಟ್ರೇಲಿಯಾ ಪಾಲಿಗೆ ಕಿಂಗ್ ಕೊಹ್ಲಿ ವಿಕೆಟ್ ನಿರ್ಣಾಯಕ. ಇದಕ್ಕೆ ಸಾಕ್ಷಿಯೇ ಆಸೀಸ್ ವಿರುದ್ಧ ವಿರಾಟ್ ಕೊಹ್ಲಿಯ ಪ್ರದರ್ಶನ.
ಲೀಗ್ ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಕೇವಲ 2 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಆಸರೆಯಾಗಿದ್ದು ವಿರಾಟ್ ಕೊಹ್ಲಿ. ಕೆಎಲ್ ರಾಹುಲ್ ಜೊತೆಗೂಡಿದ ಕೊಹ್ಲಿ 165 ರನ್ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು.
ಆ ಪಂದ್ಯದಲ್ಲಿ 85 ರನ್ ಬಾರಿಸಿ ಮಿಂಚಿದ್ದ ವಿರಾಟ್ ಕೊಹ್ಲಿ ಇದೀಗ ಒಟ್ಟಾರೆ 711 ರನ್ಗಳಿಸಿ ಈ ಬಾರಿಯ ವಿಶ್ವಕಪ್ನ ಟಾಪ್ ಸ್ಕೋರರ್ ಎನಿಸಿಕೊಂಡಿದ್ದಾರೆ. ಅಂದರೆ ಈ ಮೊದಲೇ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಕೊಹ್ಲಿ ಇದೀಗ ಅತ್ಯುತ್ತಮ ಫಾರ್ಮ್ನಲ್ಲಿರುವುದು ಆಸೀಸ್ ಪಡೆಯ ಚಿಂತೆಯನ್ನು ಹೆಚ್ಚಿಸಿದೆ. ಇನ್ನು ಏಕದಿನ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿರುದ್ದ ವಿರಾಟ್ ಕೊಹ್ಲಿ ಪ್ರದರ್ಶನ ಹೇಗಿದೆ ಎಂದು ನೋಡಿದ್ರೂ ಈ ಭಯಕ್ಕೆ ಕಾರಣ ಕೂಡ ಸ್ಪಷ್ಟವಾಗುತ್ತದೆ….
- ರನ್ ಸರದಾರ: ಕಿಂಗ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 48 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 46 ಇನಿಂಗ್ಸ್ಗಳಿಂದ 53.79ರ ಸರಾಸರಿಯಲ್ಲಿ 2313 ರನ್‌ಗಳನ್ನು ಕಲೆಹಾಕಿದ್ದಾರೆ. ಅಂದರೆ ಸಚಿನ್ ತೆಂಡೂಲ್ಕರ್ (3,077) ಬಳಿಕ ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಬ್ಯಾಟರ್ಗಳಲ್ಲಿ ಕಿಂಗ್ ಕೊಹ್ಲಿ ಕೂಡ ಒಬ್ಬರು.
- ಶತಕವೀರ: ಆಸ್ಟ್ರೇಲಿಯಾ ವಿರುದ್ಧ 46 ಏಕದಿನ ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಒಟ್ಟು 8 ಶತಕಗಳನ್ನು ಸಿಡಿಸಿದ್ದಾರೆ. ಅಂದರೆ ಸಚಿನ್ ತೆಂಡೂಲ್ಕರ್ (9) ಬಳಿಕ ಆಸೀಸ್ ವಿರುದ್ಧ ಅತೀ ಹೆಚ್ಚು ಸೆಂಚುರಿ ಸಿಡಿಸಿದ ದಾಖಲೆ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ. ಇದಲ್ಲದೆ 13 ಅರ್ಧಶತಕಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಇದರಲ್ಲೇ ಆಸೀಸ್ ವಿರುದ್ಧ ಕಿಂಗ್ ಕೊಹ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಊಹಿಸಿಕೊಳ್ಳಬಹುದು.
- ತವರಿನ ಹುಲಿ: ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 28 ಬಾರಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 57.16 ರ ಸರಾಸರಿಯಲ್ಲಿ 1,429 ರನ್ ಪೇರಿಸಿದ್ದಾರೆ. ಅಂದರೆ ತವರಿನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 50 ಕ್ಕಿಂತ ಹೆಚ್ಚಿನ ಸರಾಸರಿಯನ್ನು ಕಾಯ್ದುಕೊಳ್ಳುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ.
- ಚೇಸ್ ಮಾಸ್ಟರ್: ಏಕದಿನ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ 8 ಶತಕಗಳನ್ನು ಬಾರಿಸಿದ್ದಾರೆ. ಈ ಎಂಟು ಶತಕಗಳಲ್ಲಿ 6 ಸೆಂಚುರಿಗಳು ಮೂಡಿಬಂದಿರುವುದು ಚೇಸಿಂಗ್ ವೇಳೆ ಎಂಬುದು ವಿಶೇಷ. ಹಾಗೆಯೇ ಚೇಸಿಂಗ್ನಲ್ಲೇ 6 ಅರ್ಧಶತಕಗಳನ್ನೂ ಕೂಡ ಬಾರಿಸಿದ್ದಾರೆ. ಅಂದರೆ ಆಸೀಸ್ ವಿರುದ್ಧ ಒತ್ತಡವನ್ನು ಮೆಟ್ಟಿ ನಿಂತು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಕಿಂಗ್ ಕೊಹ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
- ಅದ್ಭುತ ಫಾರ್ಮ್: ಪ್ರಸ್ತುತ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಇದಕ್ಕೆ ಸಾಕ್ಷಿಯೇ 10 ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ಬ್ಯಾಟ್ನಿಂದ 3 ಶತಕ ಹಾಗೂ 5 ಅರ್ಧಶತಕಗಳು ಮೂಡಿ ಬಂದಿರುವುದು. ಅಲ್ಲದೆ ಈ ಬಾರಿಯ ವರ್ಲ್ಡ್ಕಪ್ನಲ್ಲಿ 101.57 ಸರಾಸರಿಯಲ್ಲಿ 711 ರನ್‌ಗಳನ್ನು ಗಳಿಸಿದ್ದಾರೆ. ಇದು ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಬ್ಯಾಟರ್ರೊಬ್ಬರು ಕಲೆಹಾಕಿದ ಗರಿಷ್ಠ ರನ್ ದಾಖಲೆ ಎಂಬುದು ವಿಶೇಷ.
- ಇತ್ತ ಆಸ್ಟ್ರೇಲಿಯಾ ಪಾಲಿಗೆ ಮೊದಲೇ ವಿರಾಟ್ ಕೊಹ್ಲಿ ಕಂಟಕವಾಗಿದ್ದರು. ಇದೀಗ ಅದ್ಭುತ ಫಾರ್ಮ್ನಲ್ಲಿರುವ ಕೊಹ್ಲಿಯನ್ನು ನಿಯಂತ್ರಿಸುವುದು ದೊಡ್ಸ ಸವಾಲೇ ಸರಿ. ಈ ಎಲ್ಲಾ ಕಾರಣಗಳಿಂದಾಗಿ ಇದೀಗ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ತಂಡದ ಚಿಂತೆಯನ್ನು ಹೆಚ್ಚಿಸಿರುವುದಂತು ಸುಳ್ಳಲ್ಲ.