ಕುಮಟಾ: ಇಲ್ಲಿನ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ ೫ ವಿದ್ಯಾರ್ಥಿಗಳು ಇಂದು ಶಿರಸಿಯಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಜಯಗಳಿಸಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗುವುದರೊಂದಿಗೆ ಕಾಲೇಜಿನ ಹಾಗೂ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕು. ಸ್ವಯಮ್ ಪೈ 50mtr ಪ್ರೀಸ್ಟೈಲ್ ನಲ್ಲಿ, 50mtr ಬ್ರೆಸ್ಟ್ ಸ್ಟ್ರೋಕ್ ನಲ್ಲಿ, 100mtr ಪ್ರೀಸ್ಟೈಲ್ ನಲ್ಲಿ ಪ್ರಥಮ ಸ್ಥಾನ ಹಾಗೂ 50mtr × 4 ರೀಲೆಯಲ್ಲಿ ಪ್ರಥಮ ಸ್ಥಾನ, ಕು. ರಾಘವೇಂದ್ರ 200mtr ಪ್ರೀಸ್ಟೈಲ್ ನಲ್ಲಿ ಪ್ರಥಮ ಸ್ಥಾನ, 50mtr ಪ್ರೀಸ್ಟೈಲ್ ನಲ್ಲಿ, 50mtr ಬ್ರೆಸ್ಟ್ ಸ್ಟ್ರೋಕ್ ನಲ್ಲಿ, ದ್ವಿತೀಯ ಸ್ಥಾನ ಹಾಗೂ 50mtr × 4 ರೀಲೆಯಲ್ಲಿ ಪ್ರಥಮ ಸ್ಥಾನ, ಕು. ದಿಕ್ಷೀತ್ ನಾಯ್ಕ 50mtr ಬ್ಯಾಕ್ ಸ್ಟ್ರೋಕ್ ನಲ್ಲಿ ಪ್ರಥಮ ಹಾಗೂ 50mtr × 4 ರೀಲೆಯಲ್ಲಿ ಪ್ರಥಮ ಸ್ಥಾನ, ಕು. ಅಕ್ಷತಾ 50mtr ಪ್ರೀಸ್ಟೈಲ್ ನಲ್ಲಿ, 50mtr ಬ್ರೆಸ್ಟ್ ಸ್ಟ್ರೋಕ್ ನಲ್ಲಿ, 100mtr ಪ್ರೀಸ್ಟೈಲ್ ನಲ್ಲಿ ಪ್ರಥಮ ಸ್ಥಾನ, ಕು. ಶ್ರೇಯಾ ನಾಯ್ಕ 50mtr ಪ್ರೀಸ್ಟೈಲ್ ನಲ್ಲಿ, 50mtr ಬ್ರೆಸ್ಟ್ ಸ್ಟ್ರೋಕ್ ನಲ್ಲಿ, 100mtr ಪ್ರೀಸ್ಟೈಲ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಕಾಲೇಜಿನ ಹಾಗೂ ಕುಮಟಾ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಶ್ರೀ ಗುರುರಾಜ ಶೆಟ್ಟಿಯವರು, ಪ್ರಾಂಶುಪಾಲರಾದ ಶ್ರೀ ಕಿರಣ ಭಟ್ಟ, ಉಪಪ್ರಾಂಶುಪಾಲರಾದ ಶ್ರೀಮತಿ ಸುಜಾತಾ ಹೆಗಡೆ, ಕ್ರೀಡಾ ಸಂಯೋಜಕರಾದ ಶ್ರೀ. ಪದ್ಮನಾಭ ಪ್ರಭು, ಶ್ರೀ. ಅವಿನಾಶ ಅಮ್ಮನಗಿ, ಶ್ರೀಮತಿ ತ್ರಿವೇಣಿ ನಾಯ್ಕ, ಉಪನ್ಯಾಸಕರಾದ ಅಕ್ಷಯ ಹೆಗಡೆ, ದೈಹಿಕ ಶಿಕ್ಷಕರಾದ ಶ್ರೀ. ದಿವಾಕರ ನಾಯ್ಕ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಹರ್ಷವನ್ನು ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.