ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಲಸಿರ್ಸಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಸಿದ್ದಾಪುರ : ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಲಸಿರ್ಸಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ ಹಳಿಯಾಳದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಿದ್ದಾಪುರದ ಕೋಲಸಿರ್ಸಿ ವಿದ್ಯಾರ್ಥಿಗಳಾದ ಕುಮಾರ್ ಮಾರುತಿ ನಾಯ್ಕ, ವಿಜಯಕುಮಾರ್ ಗಜಾನನ ನಾಯ್ಕ, ದರ್ಶನ ಆನಂದ ನಾಯ್ಕ ,ದರ್ಶನ ಗುತ್ಯಾ ಚಲುವಾದಿ ,ಪ್ರದೀಪ್ ಪರಮೇಶ್ವರ್ ನಾಯ್ಕ, ಶಶಾಂಕ್ ಗಣಪತಿ ಗೌಡ ಮತ್ತು ರೋಹಿತ್ ರಾಜು ನಾಯ್ಕ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಂದನ್ ಡಿ ನಾಯ್ಕ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಉಪಾಧ್ಯಕ್ಷರಾದ ರಾಜೇಶ್ ನಾಯ್ಕ ಕತ್ತಿ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪ್ರಾಚಾರ್ಯರಾದ ಪ್ರಶಾಂತ ಜಿ ತಾರಿಬಾಗಿಲ ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ವೃಂದ ಶುಭ ಹಾರೈಸಿದರು