BIG BREAKING NEWS ವರುಣಾರ್ಭಟಕ್ಕೆ ನಲುಗಿದ ಭಟ್ಕಳ, ತತ್ತರಿಸಿದ ಜನ.! ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿದು ನಾಲ್ವರು ಸಾವನ್ನಪ್ಪಿರುವ ಶಂಕೆ.!

ಭಟ್ಕಳ: ತಾಲೂಕಿನಲ್ಲಿ ರಾತ್ರಿ ಇಡೀ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ವರುಣಾರ್ಭಟಕ್ಕೆ ಅನೇಕ ಗ್ರಾಮಗಳು ಮುಳುಗಡೆ ಯಾಗಿದೆ. ಮುಟ್ಟಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಮನೆಗಳು ಸಂಪೂರ್ಣ ನೆಲಸಮವಾಗಿ ಮನೆಯಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಭಾರೀ ಮಳೆಯಿಂದ ಭಟ್ಕಳದ ಅನೇಕ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು. ಎನ್.ಡಿ.ಆರ್.ಎಫ್ ತಂಡ ಆಗಮಿಸಿದೆ.

ಇನ್ನು ಮುಟ್ಟಳ್ಳಿ ಗ್ರಾಮವನ್ನು ಸಂಪರ್ಕಿಸುವ ಬೈಪಾಸ್ ರಸ್ತೆ ಮಳೆಯ ಕಾರಣದಿಂದ ಬಂದ್ ಆಗಿದೆ. ಭಟ್ಕಳದ ಚೌಥನಿ ನದಿ ಉಕ್ಕಿ ಹರಿಯುತ್ತಿದ್ದು ತಾಲೂಕಿನ ಬಹುತೇಕ ಮನೆಗಳು ನೀರಿನಿಂದ ಜಲಾವೃತಗೊಂಡಿದೆ. ಮೂಡಭಟ್ಕಳ ಬೈಪಾಸನಿಂದ ಮುಟ್ಟಳ್ಳಿಗೆ ಸಂಪರ್ಕಿಸುವ ರಸ್ತೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದ್ದು ಅಲ್ಲಿನ ನಿವಾಸಿಗಳು ಮನೆಯಲ್ಲಿ ಸಿಲುಕಿ ಕೊಂಡಿದ್ದಾರೆ.

ಮಣ್ಕುಳಿ, ಚೌಥನಿ, ಮುಂಡಳ್ಳಿ, ಮುಟ್ಟಳ್ಳಿ, ಮೂಡ ಭಟ್ಕಳ ಬೈಪಾಸ್ ಸೇರಿದಂತೆ ಅನೇಕ ಗ್ರಾಮಗಳು ಮುಳುಗಡೆಯಾಗಿದೆ. ಈ ಹಿನ್ನೆಲೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕ ಅನೇಕ ಕಡೆಗಳಲ್ಲಿ ಮನೆಯಲ್ಲಿ ಸುಲಿಕಿಕೊಂಡಿರುವವರನ್ನು ರಕ್ಷಣೆ ಮಾಡುತ್ತಿದ್ದಾರೆ. ಮಣ್ಕುಳಿಯಿಂದ ಮೂಡ ಭಟ್ಕಳ ಬೈಪಾಸ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹರಿದು ಹೋಗುತ್ತಿರುವ ಹಿನ್ನೆಲೆ ಸಂಪರ್ಕ ಕಡಿತಗೊಂಡಿದೆ.