ಕುಮಟಾ : ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದೀಜಿಯವರ ಜನ್ಮದಿನದ ನಿಮಿತ್ತ ಕುಮಟಾ ಮಂಡಲ ಬಿಜೆಪಿ ವತಿಯಿಂದ ಇಂದು ಬೆಳಿಗ್ಗೆ ಮಹಾಸತಿ ದೇವಸ್ಥಾನದಲ್ಲಿ ವಿಶೇಷ ಪೂಜೆಸಲ್ಲಿಸಿ, ತದನಂತರ ಕುಮಟಾ ತಾಲೂಕಾಸ್ಪತ್ರೆಗೆ ತೆರಳಿ ರೋಗಿಗಳ ಯೋಗಕ್ಷೇಮ ವಿಚಾರಿಸಿ, ಹಣ್ಣು ಹಂಪಲು ವಿತರಿಸಲಾಯಿತು. ಈ ಸಮಯದಲ್ಲಿ ಶಾಸಕರಾದ ದಿನಕರ ಶೆಟ್ಟಿ ಮಾತನಾಡಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಶಾಸಕ ದಿನಕರ ಶೆಟ್ಟಿ, ಜಿಲ್ಲಾ ಯುವಮೋರ್ಚಾ ಪ್ರಭಾರಿ ಎಮ್. ಜಿ. ಭಟ್, ಪಕ್ಷದ ಜಿಲ್ಲಾ ಪ್ರಮುಖರಾದ ಜಿ. ಜಿ. ಹೆಗಡೆ, ಗಜಾನನ ಗುನಗಾ, ವಿನೋದ ಪ್ರಭು, ಮಂಡಲ ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ, ಪುರಸಭಾ ಚೇರಮನ್ ಕಿರಣ ಅಂಬಿಗ, ಪುರಸಭಾ ಸದಸ್ಯರಾದ ಮೋಹಿನಿ ಗೌಡ, ಸೂರ್ಯಕಾಂತ ಗೌಡ, ಸಂತೋಷ ನಾಯ್ಕ್, ಗೀತಾ ಮುಕ್ರಿ, ಒಬಿಸಿ ಮೋರ್ಚಾ ಅಧ್ಯಕ್ಷ ವಿಶ್ವನಾಥ ನಾಯ್ಕ, ಮಹಿಳಾ ಮೋರ್ಚಾದ ಜಯಾ ಶೇಟ್, ಮಾದೇವಿ ಮುಕ್ರಿ, ಮಂಜುಳಾ ಮುಕ್ರಿ, ಯುವಮೋರ್ಚಾ ಪ್ರಮುಖರಾದ ಪ್ರಜ್ವಲ್ ನಾಯಕ, ಧೀರಜ್ ನಾಯ್ಡು, ಶಶಾಂಕ ಶಾಸ್ತ್ರಿ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.