ದಾಂಡೇಲಿ : ನಗರದ ಇ.ಎಸ್.ಐ ಆಸ್ಪತ್ರೆಗೆ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಯ ನಿರ್ದೇಶನಾಲಯ ಬೆಂಗಳೂರು ಇವರು ಕೊಡಮಾಡಿದ ನೂತನ ಆಂಬುಲೆನ್ಸ್ ವಾಹನವನ್ನು ಇ.ಎಸ್.ಐ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿರುವ ಡಾ.ಸೈಯದ್ ಗೌಸ್ ಸಾಹಿಬ್ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಅತ್ಯಾಧುನೀಕ ತಂತ್ರಜ್ಞಾನವನ್ನೊಳಗೊಂಡ ನೂತನ ಆಂಬುಲೆನ್ಸ್ ವಾಹನದ ಲೋಕಾರ್ಪಣೆ ಸಂದರ್ಭದಲ್ಲಿ ಇ.ಎಸ್.ಐ ಆಸ್ಪತ್ರೆಯ ವೈದ್ಯರುಗಳಾದ ಡಾ.ವಿಶ್ವನಾಥ್ ಬರ್ಗಿ, ಆಸ್ಪತ್ರೆಯ ಕಚೇರಿ ಅಧೀಕ್ಷಕರಾದ ವಿನಾಯಕ್ ಪವಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.