ದಾಂಡೇಲಿ : ನಗರದ ಆಟೋ ಚಾಲಕರಿಗೆ ಪೊಲೀಸ್ ಇಲಾಖೆಯ ಆಶ್ರಯದಡಿ ನಗರ ಪೊಲೀಸ್ ಠಾಣೆಯಲ್ಲಿ ಮಾಹಿತಿ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಭೀಮಣ್ಣ.ಎಂ.ಸೂರಿಯವರು ಸಂಚಾರಿ ನಿಯಮಗಳ ಪಾಲನೆ ಅತೀ ಅಗತ್ಯ. ಸಂಚಾರಿ ನಿಯಮಗಳನ್ನು ಪಾಲಿಸದಿದ್ದ ಸಂದರ್ಭದಲ್ಲಿ ಆಗಬಹುದಾದ ಅನಾಹುತ, ಅವಘಡಗಳಿಂದ ಬಹಳಷ್ಟು ತೊಂದರೆಯನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಚಾಲನಾ ಪರವಾನಿಗೆ, ವಾಹನದ ದಾಖಲೆಗಳು, ವಾಹನಕ್ಕೆ ವಿಮೆ ಮಾಡುವುದು ಸೇರಿದಂತೆ ಸಂಬಂಧಪಟ್ಟ ಅಗತ್ಯ ದಾಖಲೆಗಳಿರಬೇಕು. ನಿಯಮದ ಪ್ರಕಾರ 7ಕಿ.ಮೀ ವ್ಯಾಪ್ತಿಯಲ್ಲಿ ಆಟೋಗಳಿಗೆ ಸಂಚಾರಕ್ಕೆ ಅವಕಾಶವಿದ್ದು. ಈ ನಿಯಮವನ್ನು ಪಾಲಿಸುವುದು. ಅಪರಿಚಿತ ಹಾಗೂ ಸಂಶಯಾತ್ಮಕ ವ್ಯಕ್ತಿಗಳು ಆಟೋದಲ್ಲಿ ಪ್ರಯಾಣಿಸಲು ಬಂದಂತಹ ಸಂದರ್ಭದಲ್ಲಿ ಇಲಾಖೆಯ ಗಮನಕ್ಕೆ ತರಬೇಕೆಂದು ಹೇಳಿ, ಸಂಚಾರಿ ಸುರಕ್ಷತಾ ನಿಯಮಗಳನ್ನು ಆಟೋ ಚಾಲಕರು ಕಡ್ಡಾಯವಾಗಿ ಪಾಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಿಎಸ್ಐ ಐ.ಆರ್.ಗಡ್ಡೇಕರ್ ಅವರು ಉಪಸ್ಥಿತರಿದ್ದರು