ಯಲ್ಲಾಪುರ : ಪಟ್ಟಣದ ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ತಾಲೂಕಿನ ಕಲಗದ್ದೆಯ ಸಚಿನ್ ಭಟ್ಟ ಅವರ ಗದ್ದೆಯಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಗದ್ದೆ ನಾಟಿ ಬಗೆಗೆ ವಿವರಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಮಾತನಾಡಿ, ಆಧುನಿಕ ಶಿಕ್ಷಣ ಪಡೆದು ಅದರೊಂದಿಗೆ ಕೃಷಿ ಕ್ಷೇತ್ರಕ್ಕೆ ಆಧುನಿಕತೆಯ ಸ್ಪರ್ಶ ಮಾಡುವ ಕಾರ್ಯವನ್ನು ಯುವಕರು ಮಾಡಬೇಕು ಎಂದರು.
ಸಂಸ್ಥೆಯ ವ್ಯವಸ್ಥಾಪಕ ಅಜಯ್ ಭಾರತೀಯ ಮಾತನಾಡಿ, ಎಷ್ಟೇ ಉನ್ನತ ಸ್ಥಾನ ಗಳಿಸಿದರೂ ಕೃಷಿಯನ್ನು ಜೀವನದ ಪ್ರೀತಿಯನ್ನಾಗಿಸಿಕೊಳ್ಳಬೇಕೆಂದರು.
ಭತ್ತದ ಕೃಷಿ ಹಂತಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ. ದತ್ತಾತ್ರೇಯ ಗಾಂವ್ಕರ್ ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ದ್ವಿತೀಯ ಪಿಯುಸಿಯ 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗದ್ದೆ ನಾಟಿ ಮಾಡಿ ಕೃಷಿಯ ಮಹತ್ವ ಅರಿತರು.