Chandrayaan-3; ರಾಜ್ಯದ ಎಲ್ಲಾ ಶಾಲೆಗಳಲ್ಲೂ ಲ್ಯಾಂಡಿಂಗ್‌ ನೇರ ಪ್ರಸಾರ: ಯೋಗಿ ಆದಿತ್ಯನಾಥ್‌

ಲಕ್ನೋ: ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಬುಧವಾರ ಚಂದ್ರನ ಮೇಲೆ ಲ್ಯಾಂಡ್‌ ಆಗುವ ದೃಶ್ಯವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ತಿಳಿಸಿದ್ದಾರೆ.ನೇರ ಪ್ರಸಾರ ವೀಕ್ಷಣೆಗೆ ನಾಳೆ ಶಾಲೆಗಳು ಸಂಜೆ ಒಂದು ಗಂಟೆ ವಿಶೇಷವಾಗಿ ತೆರೆದಿರುತ್ತವೆ. ಆಗಸ್ಟ್ 23 ರಂದು ಸಂಜೆ 5:27 ಕ್ಕೆ ಚಂದ್ರಯಾನ-3 ಚಂದ್ರನ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಇಸ್ರೋ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್ ಮತ್ತು ಡಿಡಿ ನ್ಯಾಷನಲ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಹೇಳಿದೆ. ಹೀಗಾಗಿ ಅಂದು ಸಂಜೆ 5:15 ರಿಂದ 6:15 ರವರೆಗೆ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಸಭೆಗಳನ್ನು ಆಯೋಜಿಸುವ ಮೂಲಕ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ಉಲ್ಲೇಖಿಸಿ ಸಿಎಂ ಬುಧವಾರ ಸಂಜೆ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ತನ್ನ ಹೊಟ್ಟೆಯಲ್ಲಿರುವ ಪ್ರಗ್ಯಾನ್ ರೋವರ್‌ನೊಂದಿಗೆ ಚಂದ್ರನ ಮೇಲ್ಮೈನಲ್ಲಿ ಸಾಫ್ಟ್‌ ಲ್ಯಾಂಡಿಂಗ್ ಆಗುವ ನಿರೀಕ್ಷೆಯಲ್ಲಿದೆ. ಚಂದ್ರಯಾನ-3 ಯೋಜನೆಯ ಚಂದ್ರನ ಲ್ಯಾಂಡಿಂಗ್ ಒಂದು ಮಹತ್ವದ ಸಂದರ್ಭವಾಗಿದ್ದು, ಇದು ನಮ್ಮ ಯುವಜನರ ಮನಸ್ಸಿನಲ್ಲಿ ಕುತೂಹಲ ಹೆಚ್ಚಿಸುವುದಲ್ಲದೇ ಅನ್ವೇಷಣೆಯ ಉತ್ಸಾಹವನ್ನು ಪ್ರಚೋದಿಸುತ್ತದೆ ಎಂದು ಅಧಿಕಾರಿ ಮಧುಸೂಧನ್ ಹುಳಗಿ ತಿಳಿಸಿದ್ದಾರೆ.ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಶಕ್ತಿಯನ್ನು ನಾವು ಒಟ್ಟಾಗಿ ಆಚರಿಸುತ್ತಿರುವಾಗ ಇದು ಹೆಮ್ಮೆ ಮತ್ತು ಏಕತೆಯ ಆಳವಾದ ಅರ್ಥವನ್ನು ಉತ್ತೇಜಿಸುತ್ತದೆ. ಈ ಅನುಕ್ರಮದಲ್ಲಿ ಸಂಜೆ 5.15 ರಿಂದ 6.15 ರವರೆಗೆ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಸಭೆ ಆಯೋಜಿಸುವ ಮೂಲಕ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲು ಎಲ್ಲಾ ಪ್ರಾಂಶುಪಾಲರು, ಮೂಲ ಶಿಕ್ಷಣ ಅಧಿಕಾರಿಗಳಿಗೆ (ಬಿಎಸ್‌ಎ) ಸೂಚಿಸಲಾಗಿದೆ ಎಂದು ಹುಳಗಿ ಮಾಹಿತಿ ನೀಡಿದ್ದಾರೆ