ಯಲ್ಲಾಪುರ: ದೇವರಾಜ ಅರಸು ಅವರ ಆಡಳಿತ ಶೈಲಿ, ಬಡವರ, ದೀನ ದಲಿತರ ಪರ ಧೋರಣೆ ಮಾದರಿಯಾದುದು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಪಟ್ಟಣದ ಟೀಡ್ ಟ್ರಸ್ಟ್ ಸಭಾಭವನದಲ್ಲಿ ತಾಲೂಕು ಆಡಳಿತ, ಬಿಸಿಎಂ ಇಲಾಖೆ ಹಮ್ಮಿಕೊಂಡಿದ್ದ ದೇವರಾಜ ಅರಸು ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈಟಿಎಸ್ಎಸ್ ಪ್ರೌಢಶಾಲೆಯ ಶಿಕ್ಷಕ ವಿನೋದ ಭಟ್ಟ, ದೇವರಾಜ ಅರಸು ಅವರ ಜೀವನ, ಸಾಧನೆ ಕುರಿತು ಉಪನ್ಯಾಸ ನೀಡಿದರು.
ತಹಸೀಲ್ದಾರ ಗುರುರಾಜ.ಎಂ, ತಾ.ಪಂ ಇಒ ಜಗದೀಶ ಕಮ್ಮಾರ, ಪ.ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ, ಬಿಸಿಎಂ ಕಲ್ಯಾಣಾಧಿಕಾರಿ ದಾಕ್ಷಾಯಿಣಿ ನಾಯ್ಕ, ಪ.ಪಂ ಸದಸ್ಯ ಅಮಿತ್ ಅಂಗಡಿ, ಮಾಜಿ ಅಧ್ಯಕ್ಷ ಶಿರೀಷ ಪ್ರಭು ಇತರರಿದ್ದರು.