ಅಮೆರಿಕದ ಪೆಸಿಫಿಕ್ ಮಹಾಸಾಗರದ ಮಧ್ಯಭಾಗದಲ್ಲಿರುವ ಹವಾಯಿ ಪ್ರಾಂತ್ಯದ ದ್ವೀಪಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ. ಅಮೆರಿಕದ ಹವಾಯಿಯಲ್ಲಿರುವ ಮಾಯಿ ಅರಣ್ಯದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ವೇಗವಾಗಿ ಅರಣ್ಯದ ತುಂಬೆಲ್ಲಾ ಹಬ್ಬುತ್ತಿದೆ. ಜನರನ್ನು ಸ್ಥಳಾಂತರಿಸುವ ಸಮಯದಲ್ಲಿ ಬೆಂಕಿಗೆ ಸಿಲುಕಿ ಲಾಹೈನಾ ಪಟ್ಟಣದಲ್ಲಿ ಕನಿಷ್ಠ 53 ಮಂದಿ ಸಾವನ್ನಪ್ಪಿದ್ದಾರೆ, ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ.
ಕಾಡಿನಲ್ಲಿ ಭೀಕರ ಬೆಂಕಿಯಿಂದಾಗಿ 14000 ಕ್ಕೂ ಹೆಚ್ಚು ಜನರನ್ನು ಮಾಯಿ ದ್ವೀಪದಿಂದ ಸ್ಥಳಾಂತರಿಸಲಾಗಿದೆ. ಲಹೈನಾದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ ಮತ್ತು ಮಾಯಿಯಲ್ಲಿ ಸುಮಾರು 11,000 ಜನರು ಕತ್ತಲೆಯಲ್ಲಿ ವಾಸಿಸುತ್ತಿದ್ದಾರೆ. ಇದಲ್ಲದೇ ಅಲ್ಲಿನ ರಸ್ತೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.
1961 ರಲ್ಲಿ ಸುನಾಮಿಯು ಬಿಗ್ ಐಲ್ಯಾಂಡ್‌ನಲ್ಲಿ 61 ಜನರ ಸಾವಿಗೆ ಕಾರಣವಾಗಿತ್ತು, ಇದಿಗ ಅಂಥದ್ದೇ ನೈಸರ್ಗಿಕ ವಿಕೋಪ ಸಂಭವಿಸಿದೆ. ಬಂದರಿನಲ್ಲಿರುವ ಹಡಗುಗಳು ಸುಟ್ಟು ಕರಕಲಾಗಿವೆ, ಇಡೀ ಪಟ್ಟಣದ ತುಂಬೆಲ್ಲಾ ದಟ್ಟ ಹೊಗೆ ಆವರಿಸಿಕೊಂಡಿದೆ.ಅಂಗಡಿ ಮುಂಗಟ್ಟುಗಳು, ಮನೆಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲವೂ ನಾಶವಾಗಿ ಹೋಗಿವೆ. ತುಂಬಾ ಬೇಸಿಗೆ ಇತ್ತು, ಚಂಡಮಾರುತದ ಬಲವಾದ ಚಂಡಮಾರುತದ ಗಾಳಿಯಿಂದಾಗಿ ಇಡೀ ಕಾಡಿಗೆ ಬೆಂಕಿ ಹಬ್ಬಿತ್ತು.