ಹಳಿಯಾಳ ತಾಲೂಕಿನ ಹವಗಿ ಮತ್ತು ಚಿಬ್ಬಲಗೇರಿ ಗ್ರಾ.ಪಂ’ಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಹಳಿಯಾಳ : ತಾಲ್ಲೂಕಿನ ಹವಗಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸುಧಾ ಜೈನ್ ಹಾಗೂ ಉಪಾಧ್ಯಕ್ಷರಾಗಿ ರಾಜು ನಿಂಗನಗೌಡ ಅವರು ಆಯ್ಕೆಯಾಗಿದ್ದಾರೆ.

ಚಿಬ್ಬಲಗೇರಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಲಕ್ಷ್ಮೀ ಮೇತ್ರಿ ಹಾಗೂ ಉಪಾಧ್ಯಕ್ಷರಾಗಿ ವಿಠ್ಠಲ ಸಿದ್ಧಣ್ಣನವರ್ ಆಯ್ಕೆಯಾಗಿದ್ದಾರೆ.