ಸೈಕಲ್ ಮೂಲಕ ದೇಶಾದ್ಯಂತ ಪ್ರಯಾಣ ಮಾಡುತ್ತಾ, ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುತ್ತಿರುವ ಯುವಕ

ಕುಮಟಾ : “ಸ್ವಚ್ಛ ಭಾರತ” “ಪ್ರಕೃತಿಯನ್ನು ಉಳಿಸಿ, ಬೆಳೆಸಿ” ಎಂಬತ ಘೋಷಣೆಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ದೇಶಾದ್ಯಂತ ಆಗಾಗ ನಡೆಯುತ್ತಿರುವುದು, ಆಮೇಲೆ ಜನ ಅದನ್ನು ಮರೆತು ಮತ್ತೆ ಯಥಾ ಪ್ರಕಾರ ಪ್ಲಾಸ್ಟಿಕ್ ಗಳನ್ನು ಎಲ್ಲೆದರಲ್ಲಿ ಬಿಸಾಡುವುದು ಇವೆಲ್ಲಾ ಮಾಮೂಲಾಗಿ ನಡೆಯುವ ಸಂಗತಿ.. ಆದರೆ ಇಲ್ಲೊಬ್ಬ ಮಹಮ್ಮದ್ ಇರ್ಫಾನ್ ಸಿದ್ದಕಿ ಎಂಬ ಪಶ್ಚಿಮ ಬಂಗಾಳದ ಕೋಲ್ಕತ್ತ ಯುವಕ, ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಾ, ಸೈಕಲ್ ಮೂಲಕ ದೇಶಾದ್ಯಂತ ಪ್ರಯಾಣ ಮಾಡುತ್ತಿರುವುದು ವಿಶೇಷ ಹಾಗೂ ಗಮನಾರ್ಹ ಅಂಶವಾಗಿದೆ..

ಈ ಯುವಕ ಕಲ್ಕತ್ತಾದಿಂದ ಕಳೆದ ವರ್ಷ ನವೆಂಬರ್ ನಲ್ಲಿ ಕಲ್ಕತ್ತಾದಿಂದ ಹೊರಟು, ಸಿಕ್ಕಿಂ- ಅಸ್ಸಾಂ – ಅರುಣಾಚಲ್ ಪ್ರದೇಶ, ನಾಗಾಲ್ಯಾಂಡ್ – ಬಿಹಾರ್ – ಯು‌ಪಿ – ಎಮ್ ಪಿ – ಪಂಜಾಬ್- ರಾಜಸ್ತಾನ – ಕೇದಾರನಾಥ- ಡೆಲ್ಲಿ – ಗುಜರಾತ್ – ಮುಂಬೈ- ಗೋವಾದಿಂದ ಇದೀಗ ಅಂಕೋಲ ಮಾರ್ಗವಾಗಿ ಕುಮಟಾ ತಲುಪಿದ್ದಾನೆ. ಇಲ್ಲಿಯವರೆಗೆ ಆತ ಸುಮಾರು 16700 ಕಿ.ಮೀ ನಷ್ಟು ಸೈಕಲ್ ನಲ್ಲಿ ಪ್ರಯಾಣ ಮಾಡಿದ್ದಾನೆ.
ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತ ಈತನ ಕನಸಾಗಿದೆ. “ದೇಶ ಬದಲಾಗಬೇಕೆಂದರೆ ಮೊದಲು ನಾವು ಬದಲಾಗಬೇಕು. ದೇಶದ ಕುರಿತು ಒಬ್ಬ ವ್ಯಕ್ತಿ ಕನಿಷ್ಟ 5 ನಿಮಿಷವಾದರೂ ವಿಚಾರ ಮಾಡಬೇಕು. ಪ್ರಕೃತಿಯನ್ನು ಉಳಿಸುವ ಸಲುವಾಗಿ ಪ್ರತಿಯೊಬ್ಬ ಪ್ರಜೆಯೂ ಕಂಕಣ ತೊಟ್ಟರೆ, ಸ್ವಚ್ಛ ಹಾಗೂ ಸುಂದರ ಪರಿಸರ ನಮ್ಮದಾಗುತ್ತದೆ..” ಎಂದು ಉತ್ಸಾಹದಲ್ಲಿ ಹೇಳುವ ಈ ಯುವಕ, ಅದರ ಸಲುವಾಗಿ ತಾನೂ ಕೂಡ ಜನರಲ್ಲಿ ಜಾಗೃತಿ ಮೂಡಿಸಲು ಈ ಸೈಕಲ್ ಪ್ರಯಾಣ ಮಾಡುತ್ತಿರುವೆ.. ಇಲ್ಲಿಂದ ಮುಂದೆ ಕೇರಳ ತಲುಪುವ ಇರಾದೆಯಿಂದ ಹೊರಟಿದ್ದಾನೆ.
ದೇಶದ ಪ್ರತಿಯೊಬ್ಬ ಪ್ರಜೆಯೂ ಈ ಯುವಕ ಆದರ್ಶವನ್ನು ಅನುಸರಿಸಿದರೆ, ಪ್ರಕೃತಿಯ ಜೊತೆ ಪರಿಸರವೂ ಕ್ಷೇಮ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ..