ಕುಮಟಾ : ಕಲಭಾಗ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಶ್ರೀ ಮಂಜುನಾಥ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಕಮಲಾ ಗಾವಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಎರಡನೇ ಅವಧಿಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದಂತಾಗಿದೆ. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸನ್ಮಾನ್ಯ ದಿನಕರ ಶೆಟ್ಟಿ ಅವರು ಕಲಭಾಗ ಗ್ರಾ. ಪಂ. ಗೆ ತೆರಳಿ ನೂತನ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಹಾರವನ್ನು ಹಾಕಿ ಅಭಿನಂದನೆ ಸಲ್ಲಿಸಿದರು.
ಕುಮಟಾ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ, ಚುನಾವಣಾ ಉಸ್ತುವಾರಿ ಅಶೋಕ ಪ್ರಭು, ಪಂಚಾಯತದ ನಿಕಟಪೂರ್ವ ಅಧ್ಯಕ್ಷೆ ಗೀತಾ ಕುಬಾಲ, ಸ್ಥಳೀಯ ಪ್ರಮುಖರಾದ ದೇವರಾಯ ನಾಯ್ಕ, ರಾಜು ಪಟಗಾರ, ಜಯವಿಠ್ಠಲ ಕುಬಾಲ, ಗಣಪತಿ ನಾಗಪ್ಪ ಪಟಗಾರ ಹಾಗೂ ಪಂಚಾಯತ್ ಸದಸ್ಯರು ಇದ್ದರು