ಜವಳಿಗಲ್ಲಿಯ ಶ್ರೀ.ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

ಹಳಿಯಾಳ : ಪಟ್ಟಣದ ಜವಳಿಗಲ್ಲಿಯಲ್ಲಿ ಶ್ರೀ.ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಅಧಿಕ ಮಾಸದ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಅಧಿಕ ಮಾಸದ ಪ್ರಯುಕ್ತ ಶ್ರೀ.ಲಲಿತಾ ಪೂಜೆ ಹಾಗೂ ಶ್ರೀ.ಲಕ್ಷ್ಮೀದೇವಿಗೆ ಸಹಸ್ರ ಕುಂಕುಮಾರ್ಚನೆ ಪೂಜಾ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನಡೆಯಿತು. ಸಂಜೆ ಸಾಮೂಹಿಕ ಭಜನಾ ಕಾರ್ಯಕ್ರಮವು ಜರುಗಿತು. ನಾಮದೇವ ದೇವಕಿ ಸಮಾಜ ಬಾಂಧವರ ಆಶ್ರಯದಡಿ ನಡೆದ ಪೂಜಾ ಕಾರ್ಯಕ್ರಮದ ನೇತೃತ್ವವನ್ನು ನಾಮದೇವ ದೇವಕಿ ಸಮಾಜದ ಮಹಿಳಾ ಸದಸ್ಯರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.