ಯಲ್ಲಾಪುರ: ಸರ್ಕಾರ ಶಿಶುಪಾಲನಾ ಕೇಂದ್ರಗಳನ್ನು ಮುಚ್ಚುತ್ತದೆ ಎಂಬ ವದಂತಿ ಇದ್ದು, ಅಂತಹ ನಿರ್ಧಾರ ಕೈಗೊಳ್ಳಬಾರದು. ಸರ್ಕಾರ ಹೆಚ್ಚಿನ ಅನುದಾನ ನೀಡಿ ಕೇಂದ್ರವನ್ನು ಮುನ್ನೆಡೆಸಿಕೊಂಡು ಹೋಗಲು ಸಹಕರಿಸಬೇಕು.
ನೂತನ ನಗರ ಶಿಶುಪಾಲನಾ ಕೇಂದ್ರದಲ್ಲಿ 40 ಕ್ಕೂ ಹೆಚ್ಚು ಅಲ್ಪ ಸಂಖ್ಯಾತ, ಎಸ್ಸಿ ಎಸ್ಟಿ ಕಾರ್ಮಿಕರ ಮಕ್ಕಳು ಓದುತ್ತಿದ್ದು ಶಿಕ್ಷಕಿ ಹಾಗೂ ಆಯಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕೇಂದ್ರ ಮುಚ್ಚಿದರೆ ಮಕ್ಕಳನ್ನು ಓದಿಸುವದು ಕಷ್ಟವಾಗುತ್ತಿದೆ ಎಂದು ದೂರಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರದ ಪ್ರಮುಖರು, ಪಾಲಕರು ಉಪಸ್ಥಿತರಿದ್ದರು.