ದೆಹಲಿ ಆಗಸ್ಟ್ 04: I.N.D.I.A ಮೈತ್ರಿಕೂಟದಲ್ಲಿನ ವಂಶಾಡಳಿತ ಪಕ್ಷಗಳಾದ ಕಾಂಗ್ರೆಸ್ ಮತ್ತು ಡಿಎಂಕೆ ಪ್ರಧಾನಿ Narendra Modi ಯನ್ನುದ್ವೇಷಿಸುವ ಕಾರಣದಿಂದಲೇ ಜತೆಯಾಗಿದ್ದಾರೆ. ಅವರಿಗೆ ವಿವಾದವನ್ನು ಪರಿಹರಿಸಲು ಸಾಧ್ಯವಾಗದೇ ಇರುವ ಕಾರಣ ತಮ್ಮ ವಂಶಾಡಳಿತವನ್ನು ರಕ್ಷಿಸುವುದಕ್ಕಾಗಿ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಜನರ ಸಮಸ್ಯೆಗಳನ್ನು ಅವರು ಪರಿಹರಿಸಬಲ್ಲರು ಎಂದು ಮತದಾರರು ನಂಬುವಂತೆ ಇವರು ಬಯಸುತ್ತಾರೆ. ಆದರೆ ಈ ಜೋಕರ್ಗಳಿಗೆ ಅವರ ಸಮಸ್ಯೆಗಳನ್ನೇ ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರಿನ ಬಾಕಿ ಹಂಚಿಕೆಗೆ ಕರ್ನಾಟಕಕ್ಕೆ ಸೂಚನೆ ನೀಡುವಂತೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಅವರು ತಮ್ಮ ಕುರುವಾಯಿ ಭತ್ತದ ಬೆಳೆಯನ್ನು ಉಳಿಸುವಲ್ಲಿ ಕಾವೇರಿ ಡೆಲ್ಟಾದ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಮುಂದಿಟ್ಟಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ಪತ್ರಕರ್ತ ವಿಜಯ್ ಕುಮಾರ್ ಎಸ್ ಅವರ ಟ್ವೀಟ್ ನ್ನು ರಾಜೀವ್ ಚಂದ್ರಶೇಖರ್ ರೀಟ್ವೀಟ್ ಮಾಡಿದ್ದಾರೆ.
ನಿಗದಿತ ಅವಧಿಯಂತೆ ರಾಜ್ಯಕ್ಕೆ ನೀಡಬೇಕಾದ ಕಾವೇರಿ ನೀರನ್ನು ತಕ್ಷಣವೇ ಬಿಡುಗಡೆ ಮಾಡಲು ಮತ್ತು 28.8 ಸಾವಿರ ಮಿಲಿಯನ್ ಟಿಎಂಸಿ ಅಡಿ ಕೊರತೆಯನ್ನು ತೆರವುಗೊಳಿಸಲು ಕರ್ನಾಟಕಕ್ಕೆ ಸಲಹೆ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.