ದಾಂಡೇಲಿ : ನಗರದ ಕಲಾಶ್ರೀ ಸಂಸ್ಥೆ ಇವರ ಆಶ್ರಯದಡಿ ಕುಂದಾಪುರದ ಹಾಲಾಡಿಯ ಶ್ರೀ.ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರ ಮೇಳೈಸುವಿಕೆಯಲ್ಲಿ ಆ:05 ರಂದು ರಾತ್ರಿ 9 ಗಂಟೆಯಿಂದ ನಗರದ ಕುಳಗಿ ರಸ್ತೆಯಲ್ಲಿರುವ ವಿದ್ಯಾಧಿರಾಜ ಸಭಾಭವನದಲ್ಲಿ ಕುಶ ಲವ ಕೀಚಕ ವಧೆ ಎಂಬ ಎಂಬ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಈ ಯಕ್ಷಗಾನದ ಹಿಮ್ಮೇಳನದಲ್ಲಿ ರಾಘವೇಂದ್ರ ಮಯ್ಯ, ಉಮೇಶ್ ಮರಾಠೆ, ರಮೇಶ್ ಭಂಡಾರಿ ಕಡತೋಕ, ಸುಬ್ರಹ್ಮಣ್ಯ ಭಟ್ ಮೂರೂರು, ಮತ್ತು ರವಿ ಕಾಡೂರು ಹಾಗೂ ಮುಮ್ಮೇಳನದಲ್ಲಿ ಕೋಡಿ ವಿಶ್ವನಾಥ ಗಾಣಿಗ, ಚಂದ್ರಹಾಸ ಗೌಡ, ಸುಧಾಕರ ಆಲೂರು, ಮಂಜುನಾಥ್ ಶೆಟ್ಟಿ, ವಿಶ್ವನಾಥ ಆಚಾರ್ಯ ತೊಂಬಟ್ಟು, ನಿತಿನ್ ಶೆಟ್ಟಿ ಸಿದ್ದಾಪುರ, ನಾರಾಯಣ ನಾಯ್ಕ, ಉಳ್ಳೂರು. ರಜಿತ್ ಕುಮಾರ್ ವಂಡ್ಸೆಯವರು ಕಲಾವಿದರುಗಳಾಗಿ ಭಾಗವಹಿಸಲಿದ್ದಾರೆ. ಸ್ತ್ರೀಪಾತ್ರದಲ್ಲಿ ಮಾಧವ ನಾಗೂರು, ರವೀಂದ್ರ ಶೆಟ್ಟಿ ಹಕ್ಲಾಡಿ ಮತ್ತು ಸಚಿನ್ ಅವರು ಕಾಣಿಸಿಕೊಳ್ಳಲಿದ್ದಾರೆ. ಮಹಾಬಲೇಶ್ವರ ಭಟ್ ಕ್ಯಾದಗಿ ಮತ್ತು ಶಂಕರ ನಾಯ್ಕ ಉಳ್ಳೂರು ಅವರು ಹಾಸ್ಯ ಪಾತ್ರದಲ್ಲಿ ಮಿಂಚಲಿದ್ದಾರೆ.
ಉಚಿತ ಪ್ರವೇಶವಿದ್ದು, ಈ ಯಕ್ಷಗಾನ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಲಾಶ್ರೀ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ