ಯುಎಸ್ಎನಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯು ಅಂತಿಮ ಹಂತಕ್ಕೆ ಬಂದು ನಿಂತಿದೆ. ಗುರುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ಮೂಲಕ ವೇಯ್ನ್ ಪಾರ್ನೆಲ್ ನಾಯಕತ್ವದ ಸಿಯಾಟಲ್ ಒರ್ಕಾಸ್ ತಂಡವು ಫೈನಲ್ ಪ್ರವೇಶಿಸಿದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಮ್ ವಿರುದ್ಧ 16 ರನ್ಗಳಿಂದ ಗೆದ್ದ ಎಂಐ ನ್ಯೂಯಾರ್ಕ್ ತಂಡವು ಚಾಲೆಂಜರ್ ಪಂದ್ಯದಲ್ಲೂ ಗೆದ್ದು ಬೀಗಿದೆ.
ಶುಕ್ರವಾರ ನಡೆದ ಚಾಲೆಂಜರ್ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್ಗಳಿಂದ ಗೆದ್ದು ಬೀಗಿದ ಕೀರನ್ ಪೊಲಾರ್ಡ್ ನಾಯಕತ್ವದ ಎಂಐ ನ್ಯೂಯಾರ್ಕ್ ತಂಡವು ಫೈನಲ್ಗೆ ಎಂಟ್ರಿ ಕೊಟ್ಟಿದೆ. ಅದರಂತೆ ಜುಲೈ 30 ರಂದು ಡಲ್ಲಾಸ್ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಹಣಾಹಣಿಯಲ್ಲಿ ಎಂಐ ನ್ಯೂಯಾರ್ಕ್ ಹಾಗೂ ಸಿಯಾಟಲ್ ಒರ್ಕಾಸ್ ತಂಡಗಳು ಮುಖಾಮುಖಿಯಾಗಲಿದೆ.
ಸಿಯಾಟಲ್ ನಾಗಾಲೋಟ:
ಸೌತ್ ಆಫ್ರಿಕಾದ ಎಡಗೈ ವೇಗಿ ವೇಯ್ನ್ ಪಾರ್ನೆಲ್ ಮುಂದಾಳತ್ವದ ಸಿಯಾಟಲ್ ಒರ್ಕಾಸ್ ತಂಡವು ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ಕೇವಲ 1 ರಲ್ಲಿ ಮಾತ್ರ ಸೋಲನುಭವಿಸಿದೆ. ಅದರಲ್ಲೂ ಮೊದಲ ಕ್ವಾಲಿಫೈಯರ್ನಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ಟೆಕ್ಸಾಸ್ ಸೂಪರ್ ಕಿಂಗ್ಸ್ಗೆ ಸೋಲುಣಿಸಿ ಫೈನಲ್ಗೆ ಪ್ರವೇಶಿಸಿದೆ.
ಇತ್ತ ಎಂಐ ನ್ಯೂಯಾರ್ಕ್ ತಂಡವು ಲೀಗ್ ಹಂತದಲ್ಲಿ ಗೆದ್ದಿರುವುದು ಕೇವಲ 2 ಪಂದ್ಯಗಳನ್ನು ಮಾತ್ರ. ಅಂದರೆ 3 ಪಂದ್ಯಗಳನ್ನು ಸೋತಿದ್ದ ಕೀರನ್ ಪೊಲಾರ್ಡ್ ಪಡೆಯು ನೆಟ್ ರನ್ ರೇಟ್ ಸಹಾಯದಿಂದ ಪ್ಲೇಆಫ್ ಪ್ರವೇಸಿತ್ತು. ಇದೀಗ ಪ್ಲೇಆಫ್ ಹಂತದಲ್ಲಿ ವಾಷಿಂಗ್ಟನ್ ಫ್ರೀಡಮ್ ಹಾಗೂ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಗಳಿಗೆ ಸೋಲುಣಿಸಿ ಫೈನಲ್ಗೆ ಪ್ರವೇಶಿಸಿರುವುದು ವಿಶೇಷ.
ಇತ್ತ ಬ್ಯಾಕ್ ಟು ಬ್ಯಾಕ್ ಎರಡು ಗೆಲುವಿನ ಹುಮ್ಮಸ್ಸಿನಲ್ಲಿರುವ ಎಂಐ ನ್ಯೂಯಾರ್ಕ್ ತಂಡವು ಅಂತಿಮ ಹಣಾಹಣಿಯಲ್ಲಿ ಸಿಯಾಟಲ್ ಒರ್ಕಾಸ್ ತಂಡಕ್ಕೆ ಭರ್ಜರಿ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ. ಹೀಗಾಗಿ ಫೈನಲ್ ಫೈಟ್ನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಎಂಐ ನ್ಯೂಯಾರ್ಕ್ ತಂಡ: ಕೀರನ್ ಪೊಲಾರ್ಡ್ (ನಾಯಕ), ಶಯಾನ್ ಜಹಾಂಗೀರ್ , ಡೆವಾಲ್ಡ್ ಬ್ರೆವಿಸ್ , ಸ್ಲೇಡ್ ವ್ಯಾನ್ ಸ್ಟೇಡೆನ್ , ಟಿಮ್ ಡೇವಿಡ್ , ನಿಕೋಲಸ್ ಪೂರನ್, ಡೇವಿಡ್ ವೀಝ, ಸ್ಟೀವನ್ ಟೇಲರ್ , ರಶೀದ್ ಖಾನ್ , ನೋಸ್ತುಶ್ ಕೆಂಜಿಗೆ , ಟ್ರೆಂಟ್ ಬೌಲ್ಟ್ , ಎಹ್ಸಾನ್ ಆದಿಲ್, ಜೇಸನ್ ಬೆಹ್ರೆಂಡಾರ್ಫ್ , ಕಗಿಸೊ ರಬಾಡ , ಹಮ್ಮದ್ ಅಜಮ್ , ಟ್ರಿಸ್ಟಾನ್ ಸ್ಟಬ್ಸ್ , ವಕಾರ್ ಸಲಾಮ್ಖೈಲ್ , ಜಸ್ದೀಪ್ ಸಿಂಗ್ , ಸರಬ್ಜಿತ್ ಲಡ್ಡಾ , ಮೊನಾಂಕ್ ಪಟೇಲ್.
ಸಿಯಾಟಲ್ ಒರ್ಕಾಸ್ ತಂಡ: ಕ್ವಿಂಟನ್ ಡಿ ಕಾಕ್, ನೌಮನ್ ಅನ್ವರ್ , ಶೆಹನ್ ಜಯಸೂರ್ಯ , ಹೆನ್ರಿಕ್ ಕ್ಲಾಸೆನ್ , ಶುಭಂ ರಂಜನೆ , ಡ್ವೈನ್ ಪ್ರಿಟೋರಿಯಸ್ , ಇಮಾದ್ ವಾಸಿಮ್ , ವೇಯ್ನ್ ಪಾರ್ನೆಲ್ (ನಾಯಕ) , ಹರ್ಮೀತ್ ಸಿಂಗ್ , ಆಂಡ್ರ್ಯೂ ಟೈ , ಕ್ಯಾಮರೂನ್ ಗ್ಯಾನನ್, ದಸುನ್ ಶಾನಕ , ಏಂಜೆಲೊ ಪೆರೇರಾ , ಹೇಡನ್ ವಾಲ್ಷ್ , ಆರನ್ ಜೋನ್ಸ್ , ನಿಸರ್ಗ್ ಪಟೇಲ್ , ಫಣಿ ಸಿಂಹಾದ್ರಿ , ಮ್ಯಾಥ್ಯೂ ಟ್ರಂಪ್.