ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರಿಗೆ ವರ್ಗಾವಣೆ

ದಾಂಡೇಲಿ : ಕಳೆದ 6 ತಿಂಗಳಿನಿಂದ ದಾಂಡೇಲಿ ತಾಲ್ಲೂಕಿನ ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ್ ಶಿಗ್ಗಾವಿಯವರಿಗೆ ವರ್ಗಾವಣೆಯಾಗಿದೆ. ಈ ಬಗ್ಗೆ ಇಂದು ಅಧಿಕೃತ ವರ್ಗಾವಣೆ ಆದೇಶ ಬಂದಿದೆ.

ವಿಧಾನ ಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೆ ಕುಂದಗೋಳದಿಂದ ವರ್ಗಾವಣೆಗೊಂಡು ಬಂದಿದ್ದ ಅಶೋಕ್ ಶಿಗ್ಗಾವಿಯವರು ಅಲ್ಪ ಸಮಯದಲ್ಲೆ ಅತ್ಯುತ್ತಮ ಅಧಿಕಾರಿಯಾಗಿ ಗಮನ ಸೆಳೆದಿದ್ದರು.