ರಾಮನಗರದಲ್ಲಿ ಮತ್ತೆ ವಂದೇ ಭಾರತ್ ರೈಲಿನ ಮೇಲೆ ಕಲ್ಲೆಸೆತ! ಗಾಜು ಪುಡಿ ಪುಡಿ

ರಾಮನಗರ, ಜು.28: ಪಟ್ಟಣದ ಹೊರವಲಯದಲ್ಲಿ Vande Bharat Train ಮೇಲೆ ಮತ್ತೆ ಕೀಡಿಗೇಡಿಗಳು ಕಲ್ಲೆಸೆದಿದ್ದಾರೆ. ಈ ಹಿಂದೆ ಕೂಡ ಇಂತಹುದೇ ಘಟನೆ ನಡೆದಿತ್ತು. ಮತ್ತೆ ಇದೀಗ ಇಂತಹ ಘಟನೆ ಬೆಳಕಿಗೆ ಬಂದಿದೆ. ಈ ರೈಲು ಮೈಸೂರಿನಿಂದ ಚೆನೈಗೆ ತೆರಳುತ್ತಿತ್ತು. ಈ ವೇಳೆ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಕಲ್ಲು ಎಸೆದ ರಭಸಕ್ಕೆ ಕಿಟಕಿ ಗಾಜು ಪುಡಿಯಾಗಿ ಸೀಟಿನ ಮೇಲೆ ಬಿದ್ದಿದ್ದು, ಆತಂಕದಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವಂತಾಗಿದೆ. ಇದೀಗ ಕಲ್ಲು ಹೊಡೆದ ಕಿಡಗೇಡಿಗಳ ಪತ್ತೆ ಕಾರ್ಯ ಶುರುವಾಗಿದೆ.

ಧಾರವಾಡ-ಬೆಂಗಳೂರು ವಂದೇ ಭಾರತ್​ ಆರಂಭವಾದ ನಾಲ್ಕೇ ದಿನಕ್ಕೆ ಕಲ್ಲೆಸೆತ

ಕೇಂದ್ರದ ಮಹತ್ತರ ಸೇವೆಗಳಲ್ಲಿ ಒಂದಾಗ ವಂದೇ ಭಾರತ್ ಎಕ್ಸಪ್ರೆಸ್ ರೈಲುಗಳ ಮೇಲೆ ಕಲ್ಲೆಸೆತ ನಡೆಯುತ್ತಲೇ ಇದೆ. ಹೌದು ಇದೆ ಮೊದಲಲ್ಲ ಧಾರವಾಡ ಬೆಂಗಳೂರು ವಂದೇ ಭಾರತ್​ ರೈಲು ಆರಂಭವಾದ ನಾಲ್ಕೇ ದಿನಕ್ಕೆ ದಾವಣಗೆರೆಯ ಹೊರವಲಯದಲ್ಲಿ ಕಲ್ಲೆಸೆತವಾಗಿತ್ತು. ಧಾರವಾಡದಿಂದ ಜುಲೈ 1 ರಂದು ಬೆಂಗಳೂರಿಗೆ ತೆರೆಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಅದೃಷ್ಟವಶಾತ್ ​ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲವಾಗಿತ್ತು.

ರಾಜ್ಯದ ಮೊದಲ ಮೈಸೂರು-ಚನ್ನೈ  ವಂದೇ ಭಾರತ್​ ಎಕ್ಸಪ್ರೆಸ್​ ರೈಲಿಗೂ ಕಲ್ಲೆಸೆತ

ಕರ್ನಾಟಕದ ಮೊದಲ ಮೈಸೂರು-ಚನ್ನೈ  ವಂದೇ ಭಾರತ್​ ಎಕ್ಸಪ್ರೆಸ್​ ರೈಲಿಗೂ ಕೆ ಆರ್​ ಪುರಂ ಮತ್ತು ಬೆಂಗಳೂರು ಕಂಟೋನ್​​ಮೆಂಟ್​​ ರೇಲ್ವೆ ನಿಲ್ದಾಣದ ಮಧ್ಯೆ ಕೀಡಿಗೇಡಿಗಳು ಕಲ್ಲೆಸೆತ ಮಾಡಿದ ಘಟನೆ ನಡೆದಿತ್ತು. ಈ ವೇಳೆ ಕಿಟಕಿಯ ಗಾಜು ತಾಕಿ ಪ್ರಯಾಣಿಕರಿಗೆ ಗಾಯಗಳಾಗಿತ್ತು ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿತ್ತು. ಈ ಘಟನೆ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ರಾಮನಗರದಲ್ಲಿ ಮತ್ತೆ ಇಂತಹ ಘಟನೆ ನಡೆದಿದೆ.