ಅಲ್ಲೊಳ್ಳಿಯಲ್ಲಿ ಶಾಲೆಯ ಗೋಡೆ ಕುಸಿತ : ಆತಂಕದಲ್ಲಿ ವಿದ್ಯಾರ್ಥಿಗಳು

ಹಳಿಯಾಳ : ತಾಲ್ಲೂಕಿನ ಚಿಬ್ಬಲಗೇರಿ ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಬರುವ ಅಲ್ಲೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆ ಕುಸಿದಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಎದುರಾಗಿದೆ. ಗೋಡೆ ಕುಸಿದಿರುವುದರ ಬಗ್ಗೆ ಚಿಬ್ಬಲಗೇರಿ ಗ್ರಾಮ ಪಂಚಾತಯ್ತು ಅಭಿವೃದ್ಧಿ ಅಧಿಕಾರಿ ಭೀಮುಶಿ ಗುಡದಾರ್, ಕಾರ್ಯದರ್ಶಿ ಶೋಭಾ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸಾವಿತ್ರಿ ಕಾಂಬಳೆಯವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳಿಯಾಳ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.