ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ವಿವಿಧೆಡೆ ಬಿಳಿ ಮಂಗಗಳ ಹಾವಳಿ

ಯಲ್ಲಾಪುರ:
ತಾಲೂಕಿನ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ವಿವಿಧೆಡೆ ಬಿಳಿ ಮಂಗಗಳ ಹಾವಳಿಯಿಂದ ಅಡಕೆ ಬೆಳೆ ನಾಶವಾಗುತ್ತಿದ್ದು, ಮಂಗಗಳ ಹತೋಟಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತರು ಮಂಚಿಕೇರಿ ವಲಯ ಅಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಂಗಗಳು ಎಳೆ ಅಡಕೆಗಳನ್ನೇ ತಿಂದು ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟು ಮಾಡುತ್ತಿವೆ.‌ ಎಲೆ ಚುಕ್ಕೆ ರೋಗದಿಂದ ರೈತರು ಕಂಗಾಲಾಗಿದ್ದು, ಮಂಗಗಳ ಕಾಟದಿಂದ ಇನ್ನಷ್ಟು ಚಿಂತೆ ಹೆಚ್ಚಿದೆ. ಇಲಾಖೆಯಿಂದ ಮಂಗಗಳ ಹತೋಟಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರೈತರ ಮನವಿಯನ್ನು ಆಲಿಸಿದ ಮಂಚೀಕೇರಿ ವಲಯ ಅರಣ್ಯಾಧಿಕಾರಿ ಅಮಿತ್, ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು, ಅವರ ಮಾರ್ಗದರ್ಶನದಂತೆ ಇನ್ನೊಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಉಮ್ಮಚಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ, ರೈತರಾದ ವೆಂಕಟರಮಣ ಹೆಗಡೆ, ಉದಯ ಭಟ್ಟ ಕಲ್ಲಳ್ಳಿ, ನಾಗಪತಿ ಹೆಗಡೆ ಶೀಗೆಮನೆ, ಸುಬ್ರಾಯ ಭಾಸ್ಕರ ಹೆಗಡೆ ಕನೇನಳ್ಳಿ, ಜಿ.ಟಿ.ಹೆಗಡೆ, ಪರಮೇಶ್ವರ ಹೆಗಡೆ, ಕೃಷ್ಣ ಹೆಗಡೆ, ವೆಂಕಣ್ಣ ಹೆಗಡೆ, ಸತೀಶ ಹೆಗಡೆ, ಗ್ರಾ.ಪಂ.ಸದಸ್ಯ ಗ.ರಾ.ಭಟ್ಟ ಉಪಸ್ಥಿತರಿದ್ದರು.