ಕಿಲಿಯನ್ ಎಂಬಾಪ್ಪೆಗೆ 2,718 ಕೋಟಿ ರೂ. ಆಫರ್ ನೀಡಿದ ಸೌದಿ ಕ್ಲಬ್

ಫ್ರಾನ್ಸ್​ನ ಖ್ಯಾತ ಕಾಲ್ಚೆಂಡು ಚತುರ ಕಿಲಿಯನ್ ಎಂಬಾಪ್ಪೆ ಹೊಸ ಕ್ಲಬ್ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಪ್ರಸ್ತುತ ಕ್ಲಬ್ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಅವರನ್ನು ಟ್ರಾನ್ಸ್​ಫರ್​ ಸೇಲ್​ಗೆ ಇರಿಸಿದ್ದಾರೆ. ಇತ್ತ ಎಂಬಾಪ್ಪೆಯ ಹೆಸರು ಟ್ರಾನ್ಸ್​ಫರ್​ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಅತ್ತ ಸೌದಿ ಅರೇಬಿಯಾ ಖ್ಯಾತ ಫುಟ್​ಬಾಲ್ ಕ್ಲಬ್ ಅಲ್-ಹಿಲಾಲ್ ಬರೋಬ್ಬರಿ 300 ಮಿಲಿಯನ್ ಯೂರೋ ಬಿಡ್ ಸಲ್ಲಿಸಿದ್ದಾರೆ ವರದಿಯಾಗಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 2,718 ಕೋಟಿ ರೂ.

ಈ ಟ್ರಾನ್ಸ್​ಫರ್ ಡೀಲ್ ಯಶಸ್ವಿಯಾದರೆ ಫುಟ್​ಬಾಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ವರ್ಗಾವಣೆಗೊಂಡ ಆಟಗಾರ ಎಂಬ ವಿಶ್ವ ದಾಖಲೆ ಕಿಲಿಯನ್ ಎಂಬಾಪ್ಪೆ ಎಂಬಾಪ್ಪೆ ಪಾಲಾಗಲಿದೆ. ಇದಕ್ಕೂ ಮುನ್ನ ಬ್ರೆಝಿಲ್​ನ ನೇಮರ್ ಜೂನಿಯರ್ ದಾಖಲೆ ಮೊತ್ತಕ್ಕೆ ಟ್ರಾನ್ಸ್​ಫರ್ ಆಗಿದ್ದರು.

2017 ರಲ್ಲಿ ಬರ್ಸಿಲೋನಾ ಫುಟ್​ಬಾಲ್ ಕ್ಲಬ್ ನೇಮರ್ ಅವರನ್ನು 222 ಮಿಲಿಯನ್ ಯೂರೋಗೆ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್​ಗೆ ಟ್ರಾನ್ಸ್​ಫರ್ ಮಾಡಿದ್ದರು. ಇದೀಗ ಎಂಬಾಪ್ಪೆಗಾಗಿ ಅಲ್​ ಹಿಲಾಲ್ ಕ್ಲಬ್ 300 ಮಿಲಿಯನ್ ಯೂರೋಗೆ ಬಿಡ್ ಸಲ್ಲಿಸಿದ್ದು, ಈ ಡೀಲ್ ಸಕ್ಸಸ್ ಆದರೆ ಹೊಸ ದಾಖಲೆ ನಿರ್ಮಾಣವಾಗಲಿದೆ.

PSG ಎಂಬಾಪ್ಪೆಯನ್ನು ಕೈ ಬಿಡುತ್ತಿರುವುದೇಕೆ?

ಈ ವರ್ಷದ ಸೀಸನ್​ನೊಂದಿಗೆ ಕಿಲಿಯನ್ ಎಂಬಾಪ್ಪೆ ಹಾಗೂ PSG ನಡುವಣ ಒಪ್ಪಂದ ಮುಗಿಯಲಿದೆ. ಆದರೆ ಇದಕ್ಕೂ ಮುನ್ನವೇ ಯುರೋಪ್​​ನ ಮತ್ತೊಂದು ಖ್ಯಾತ ಫುಟ್​​ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ ಎಂಬಾಪ್ಪೆಗೆ ತೆರೆ ಮರೆಯಲ್ಲಿ ಬಿಗ್ ಆಫರ್ ನೀಡಿದೆ ವರದಿಯಾಗಿದೆ. ಇದೇ ಕಾರಣದಿಂದಾಗಿ PSG ಜೊತೆಗಿನ ಒಪ್ಪಂದವನ್ನು ಮುಂದುವರಿಸಲು ಎಂಬಾಪ್ಪೆ ಆಸಕ್ತಿ ತೋರಿಸಿಲ್ಲ.

ಇತ್ತ ಎಂಬಾಪ್ಪೆ ಹಾಗೂ PSG ಜೊತೆಗಿನ ಒಪ್ಪಂದ ಇನ್ನೂ ಒಂದು ಸೀಸನ್​ವರೆಗೆ ಬಾಕಿ ಇದೆ. ಈ ಅವಧಿಯೊಳಗೆ ಯುವ ಆಟಗಾರನನ್ನು ಬೇರೊಂದು ಕ್ಲಬ್​ಗೆ ವರ್ಗಾವಣೆ ಮಾಡಲು PSG ತಂಡದ ಮಾಲೀಕರು ನಿರ್ಧರಿಸಿದ್ದಾರೆ. ಹೀಗಾಗಿ ಕೈಲಿಯನ್ ಎಂಬಾಪ್ಪೆಯನ್ನು ಟ್ರಾನ್ಸ್​ಫರ್​​ಗೆ ಇರಿಸಲಾಗಿದ್ದು, ಇದೀಗ ಫೆಂಚ್ ಆಟಗಾರನ ಖರೀದಿಗೆ ಸೌದಿಯ ಅಲ್ ಹಿಲಾಲ್ ಕ್ಲಬ್ ಮುಂದೆ ಬಂದಿದೆ. ಈ ಡೀಲ್​ ಯಶಸ್ವಿಯಾದರೆ ಕಿಲಿಯನ್ ಎಂಬಾಪ್ಪೆ ಒಂದು ವರ್ಷದವರೆಗೆ ಅಲ್ ಹಿಲಾಲ್ ಪರ ಕಣಕ್ಕಿಳಿಯಬಹುದು.