ದಾವಣಗೆರೆ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಟ್ಯಾಪುರ ಹಿರೇಕಲ್ಮಠದ ಶ್ರೀ ಗಿರಿಸಿದ್ದೇಶ್ವರ್ ಶಿವಾಚಾರ್ಯ ಸ್ವಾಮೀಜಿ (62) ಸೋಮವಾರ ಬೆಳಗ್ಗೆ ಲಿಂಗಕ್ಯರಾಗಿದ್ದಾರೆ.
ಹೊನ್ನಾಳಿ ದಾವಣಗೆರೆ ಸೇರಿದಂತೆ ಹಲವು ಭಾಗಗಳಲ್ಲಿ ಅಪಾರ ಪ್ರಮಾಣದ ಭಕ್ತ ಗಣ ಹೊಂದಿರುವ ಸ್ವಾಮೀಜಿ ಕೆಲ ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳುತ್ತಿದ್ದರು. ಈ ಹಿನ್ನೆಲೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ ಡಯಾಲಿಸಿಸ್ಗೆ ಒಳಪಟ್ಟಿದ್ದು, ವಾತಾವರಣ ತಂಪು ಇದ್ದ ಹಿನ್ನೆಲೆ ಸೋಂಕು ಹೆಚ್ಚಾಗಿ ಅವರ ಸ್ಥಿತಿ ಗಂಭೀರವಾಗಿತ್ತು.
ಇಂದು ಬೆಳಗ್ಗೆ ಅವರು ಆಸ್ಪತ್ರೆಯಲ್ಲಿ ಲಿಂಗಕ್ಯರಾಗಿದ್ದು, ಸ್ವಾಮೀಜಿಗಳ ಪಾರ್ಥಿವ ಶರೀರವನ್ನು ಹೊಟ್ಯಾಪುದ ಹಿರೇಕಲ್ಮಠಕ್ಕೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ಹೊಟ್ಯಾಪುರ ಮಠದಲ್ಲಿ ನೀರವ ಮೌನ ಅವರಿಸಿದ್ದು, ಮಠಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಇನ್ನು ಮಠದ ಆವರಣದಲ್ಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿ ವಿಧಾನಗಳು ನಡೆಯಲಿದೆ.