ರಾಜ್ಯ ಮಟ್ಟದ ವಾಕೋ ಕರ್ನಾಟಕ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಟ್ಕಳ ವಿದ್ಯಾರ್ಥಿಗಳ ಸಾಧನೆ

ಐದು ಚಿನ್ನದ, ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಪಡೆದ ವಿದ್ಯಾರ್ಥಿ

ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಭಟ್ಕಳ: ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ವಾಕೋ ಕರ್ನಾಟಕ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಟ್ಕಳದ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ  ಕಿಕ್ ಬಾಕ್ಸಿಂಗ್ ನ ವಿದ್ಯಾರ್ಥಿಗಳು ಮೂರನೆಯ ರಾಜ್ಯ ಮಟ್ಟದ ಜೂನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಐದು ಚಿನ್ನದ ಪದಕ,ಮೂರು ಬೆಳ್ಳಿಯ ಪದಕ  ಎರಡು ಕಂಚಿನ ಪದಕಗಳಿಸಿದ್ದಾರೆ. ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು  ಜಾರ್ಖಂಡ್ ನ ರಾಂಚಿಯಲ್ಲಿ ನಡೆಯುವ ನಡೆಯುವ ರಾಷ್ಟ್ರಮಟ್ಟದ ಜೂನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.

7-9 ವರ್ಷದ ವಿಭಾಗದಲ್ಲಿ ಧನ್ವಿತಾ ವಾಸು ಮೊಗೇರ, 19 ಕೆಜಿ ವಿಭಾಗದ ಪಾಯಿಂಟ್ ಫೈಟಿಂಗ್ ನಲ್ಲಿ ಚಿನ್ನದ ಪದಕ ಹಾಗೂ ಮ್ಯೂಸಿಕಲ್ ಫಾರ್ಮ್ ನಲ್ಲಿ ಬೆಳ್ಳಿಯ ಪದಕ , ಆಧ್ಯಾ ರವಿ ನಾಯ್ಕ 22ಕೆಜಿ ವಿಭಾಗದ ಪಾಯಿಂಟ್ ಫೈಟಿಂಗ್ ನಲ್ಲಿ ಚಿನ್ನದ ಪದಕ ಹಾಗೂ ಕ್ರಿಯೇಟಿವ್ ಫಾರ್ಮ್ ನಲ್ಲಿ ಬೆಳ್ಳಿಯ ಪದಕ.10-12 ವರ್ಷದ ವಿಭಾಗದಲ್ಲಿ  ಜೀವಲ್ ಭಾಸ್ಕರ ಮೊಗೇರ*
28ಕೆಜಿ ವಿಭಾಗದ ಪಾಯಿಂಟ್ ಫೈಟ್ ನಲ್ಲಿ ಬೆಳ್ಳಿಯ ಪದಕ ಹಾಗೂ ಮ್ಯೂಸಿಕಲ್ ಫಾರ್ಮ್ ನಲ್ಲಿ ಐದನೇ ಸ್ಥಾನ , ಚಿರಾಗ್ ಮಹೇಶ ನಾಯ್ಕ 30ಕೆಜಿ ವಿಭಾಗದ ಪಾಯಿಂಟ್ ಫೈಟ್ ನಲ್ಲಿ ಕಂಚಿನ ಪದಕ,ಹಾಗೂ ಕ್ರಿಯೇಟಿವ್ ಫಾರ್ಮ್ ನಲ್ಲಿ ನಾಲ್ಕನೇ ಸ್ಥಾನ, ಜುರಾರ ಲೌನಾ 42ಕೆಜಿ ಪಾಯಿಂಟ್ ಫೈಟ್ ನಲ್ಲಿ ಬೆಳ್ಳಿಯ ಪದಕ, ಮೊಹಮ್ಮದ್ ದಾಮಿಲ್ 47ಕೆಜಿ ಪಾಯಿಂಟ್ ಫೈಟ್ ನಲ್ಲಿ ಚಿನ್ನದ ಪದಕ, 13-15 ವರ್ಷದ ವಿಭಾಗ
ಲಿಖಿತಾ ಶಂಕರ ನಾಯ್ಕ – 47ಕೆಜಿ ಪಾಯಿಂಟ್ ಫೈಟ್ ಚಿನ್ನದ ಪದಕ, ಯಶಸ್ ವಾಮನ ಮೊಗೇರ -42ಕೆಜಿ ಪಾಯಿಂಟ್ ಫೈಟ್ ಐದನೇ ಸ್ಥಾನ, ಲಿಖಿತ್ ಲಕ್ಷ್ಮಣ ದೇವಾಡಿಗ ಕ್ರಿಯೆಟಿವ್ ಫಾರ್ಮ್ ನಲ್ಲಿ ಕಂಚಿನ ಪದಕ ಹಾಗೂ ಪಾಯಿಂಟ್ ಫೈಟ್ ನಲ್ಲಿ ಐದನೇ ಸ್ಥಾನ, ಮೊಹಮ್ಮದ್ ಯುಶಾ -57ಕೆಜಿ ಪಾಯಿಂಟ್ ಫೈಟ್ ನಲ್ಲಿ ಚಿನ್ನದ ಪದಕ ಪಡೆದು ಭಟ್ಕಳಕ್ಕೆ ಕೀರ್ತಿ ತಂದಿದ್ದಾರೆ. ಈ ಎಲ್ಲಾ ವಿಜೇತ ಪಟುಗಳಿಗೆ ವಾಕೋ
ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಸಂತೋಷ ಸ ಮತ್ತು ಪ್ರಧಾನ ಕಾರ್ಯದರ್ಶಿಯಾದ ಪೂಜಾ ಹರ್ಷ ಉತ್ತರ ಕನ್ನಡ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಈಶ್ವರ ಎನ್ ನಾಯ್ಕ ಹಾಗೂ ಮಾರ್ಷಲ್ ಆರ್ಟ್ಸ್ & ಫಿಟ್ನೆಸ್ ನ ತರಬೇತುದಾರರಾದ ನಾಗಶ್ರೀ ವಿ ನಾಯ್ಕ ಮತ್ತು ಶೋಟೊಕಾನ್ ಸಂಸ್ಥೆಯ ಅಧ್ಯಕ್ಷರಾದ ಉಮೇಶ ಮೊಗೇರ ಸದಸ್ಯರಾದ  ಮನೋಜ್ ನಾಯ್ಕ , ಸಂತೋಷ್ ಆಚಾರ್ಯ, ಚಂದ್ರು ನಾಯ್ಕ, ಏಲೀಯನ್ಸ್ ಮಾರ್ಷಲ್ ಆರ್ಟ್ಸ್ ನ ತರಬೇತುದಾರರಾದ  ಇಸ್ಮಾಯಿಲ್ ಮತ್ತು ಪಾಲಕರು ಪೋಷಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ