ಅಮೇರಿಕಾದ ಕೆರೊಲಿನಾದಲ್ಲಿರುವ ಮನೆಯೊಂದರ ಬಾತ್‌ರೂಮ್‌ನಲ್ಲಿ ಕಪ್ಪು ಬಣ್ಣದ ಹಾವೊಂದು ಕಾಣಿಸಿಕೊಂಡಿದೆ, ಇದರಿಂದ ಭಯಗೊಂಡ ಮನೆಯವರು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಅಮೆರಿಕದ ಗ್ರಹಾಂ ಪೊಲೀಸ್ ಇಲಾಖೆ ಈ ಬಗ್ಗೆ ಫೇಸ್ಬುಕ್ನಲ್ಲಿ ಒಂದು ಪೋಸ್ಟ್ನ್ನು ಹಂಚಿಕೊಂಡಿದ್ದಾರೆ. ಹಾವನ್ನು ನೋಡಿ ಭಯಗೊಂಡ ಮನೆಯವರು ಪೊಲೀಸರಿಗೆ ಫೋನ್ ಮಾಡಿ. ನಮ್ಮ ಮನೆಯ ಬಾತ್ರೂಮ್ಗೆ ಕಪ್ಪು ಬಣ್ಣದ ಹಾವು ಬಂದಿದೆ, ದಯವಿಟ್ಟು ಅದನ್ನು ಹಿಡಿಯಲು ಬನ್ನಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಹಾವು ಇರುವ ಮನೆಗೆ ಬಂದು ನೋಡಿದಾಗ ಬಾತ್‌ರೂಮ್‌ನಲ್ಲಿ ಬೃಹತ್ ಆಕಾರದ ಕಪ್ಪು ಬಣ್ಣದ ಹಾವು ಪತ್ತೆಯಾಗಿದೆ. ಪೊಲೀಸರು ಹಾವು ಹಿಡಿದಿರುವ ಫೋಟೋವನ್ನು ಇಲಾಖೆಯ ಫೇಸ್‌ಬುಕ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಇದು ತುಂಬಾ ವಿಷಕಾರಿ ಹಾವು ಎಂದು ತಿಳಿಸಿದ್ದಾರೆ.
ಪೊಲೀಸರು ತಮ್ಮ ಫೇಸ್‌ಬುಕ್ ಪೋಸ್ಟ್ ಜತೆಗೆ ಹೀಗೆ ಬರೆದುಕೊಂಡಿದ್ದಾರೆ. ರಾತ್ರಿ ವೇಳೆ ನಮ್ಮ ರಾಣೆಗೆ ಒಂದು ಕರೆ ಬಂದಿತ್ತು. ನಮ್ಮ ಮನೆಗೆ ದೊಡ್ಡದಾದ, ಕಪ್ಪು ಬಣ್ಣದ ಹಾವು ಬಂದಿದೆ ಸರ್, ತಕ್ಷಣ ಬನ್ನಿ ಎಂದು, ಇದಕ್ಕೆ ನಾವು ಕೂಡ ಪ್ರತಿಕ್ರಿಯೆ ನೀಡಿ, ತಕ್ಷಣ ಹಾವು ಇರುವ ಮನೆಗೆ ಹೋಗಿ, ಸ್ನಾನಗೃಹದಲ್ಲಿ ಅಡಗಿಕೊಂಡಿದ್ದ ಹಾವನ್ನು ಪತ್ತೆ ಮಾಡಲು ಕಾರ್ಯಚರಣೆ ಆರಂಭಿಸಿದ್ದೇವು, ಸ್ವಲ್ಪ ಸಮಯದ ನಂತರ ಅದನ್ನು ಪತ್ತೆ ಮಾಡಿ, ಹಿಡಿದು, ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಗ್ರಹಾಂ ಪೊಲೀಸರು ತಿಳಿಸಿದ್ದಾರೆ.
ಆದರೆ ಪೊಲೀಸರು ಇದು ಯಾವ ಜಾತಿಯ ಹಾವು ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಇದು ಮನೆ ಒಳಗೆ ಹೇಗೆ ಬಂತು ಎಂಬುದನ್ನು ಕೂಡ ಮನೆಯವರು ತಿಳಿಸಿಲ್ಲ. ಇನ್ನೂ ಈ ಪೋಸ್ಟ್ಗೆ ಅನೇಕರು ಕಮೆಂಟ್ ಮಾಡಿದ್ದು, ಒಬ್ಬ ಬಳಕೆದಾರ ಪೊಲೀಸರ ಕೆಲಸಕ್ಕೆ ಶ್ಲಾಘಿಸಿದ್ದಾರೆ. ವಾವ್! ಮಹೋನ್ನತ ವ್ಯಕ್ತಿ! ನೀವು ಮಾಡಿದ ಕೆಲಸಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.