ಚಾಮರಾಜನಗರ, ಜು.20: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ಜು.18 ರಂದು ಕಲುಷಿತ ಆಹಾರ ಸೇವಿಸಿ ಒಟ್ಟು 24 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿಂದಂತೆ ಯಡವನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಿನ್ಸಿಪಾಲ್ ಆಗಿರುವ ಕುಮಾರಸ್ವಾಮಿ ಎನ್ನುವವರನ್ನ ಅಮಾನತು ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಿಇಒ ಡಾ.ನವೀನ್‌ಕುಮಾರ್ ಆದೇಶ ಹೊರಡಿಸಿದ್ದಾರೆ. ಇನ್ನು ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳನ್ನು ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿತ್ತು.
ವಿದ್ಯಾರ್ಥಿಗಳಿಗೆ ಸಮರ್ಪಕ ಊಟ ವಸತಿ ನೀಡದ ಆರೋಪ
ಇನ್ನು ವಸತಿ ನಿಲಯದ ಶುಚಿತ್ವ, ಆಹಾರ ಸಾಮಾಗ್ರಿಗಳ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಆರೋಪ ಕೇಳಿಬಂದಿತ್ತು. ವಿದ್ಯಾರ್ಥಿಗಳಿಗೆ ಸಮರ್ಪಕ ಊಟ ವಸತಿ ನೀಡದೇ, ಜೊತೆಗೆ ವಸತಿ ನಿಲಯ ಪಾಲಕರ ಪ್ರಭಾರವನ್ನು ಬೇರೆ ಶಿಕ್ಷಕರಿಗೆ ವಹಿಸದೆ ಪ್ರಾಂಶುಪಾಲ ತಾವೇ ನಿರ್ವಹಿಸುತ್ತಿದ್ದರು. ಅದರಂತೆ ಭಾನುವಾರ ರಾತ್ರಿ ಊಟ ಸೇವಿಸಲು ಬಂದ ಮಕ್ಕಳು, ಇವತ್ತು ಊಟದಲ್ಲಿ ಉಪ್ಪು, ಕಾರ ಕಡಿಮೆಯಿದೆಯೆಂದು ಹೇಳಿ ಹಾಕಿಸಿಕೊಂಡಿದ್ದಾರೆ. ಬಳಿಕ ಹೊಟ್ಟೆ ನೋವು, ವಾಂತಿ ಸುರುವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿತ್ತು.