ಕುಮಟಾ: ಡ್ರೀಮ್ ಜೋನ್ ಪ್ಯಾಶನ್ ಡಿಸೈನಿಂಗ್ ಚೆನೈ ಇದರಿಂದ ನಡೆದ ರಾಜ್ಯಮಟ್ಟದ ಪ್ಯಾಶನ್ ಡಿಸೈನಿಂಗ್ ಸ್ಪರ್ಧೆಯಲ್ಲಿ ತಾಲೂಕಿನ ಮುರೂರಿನ ಅನನ್ಯ ಶಂಭಯ್ಯ ವೈದ್ಯ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಉಡುಪಿಯ ಡ್ರೀಮ್ ಜೋನ್ ಪ್ಯಾಶನ್ ಡಿಸೈನಿಂಗ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಅನನ್ಯ ವೈದ್ಯ ಇವರು, ಎಸ್.ಎಸ್.ಎಲ್.ಸಿ ಯ ಬಳಿಕ, ಹನುಮಂತ ಬೆಣ್ಣೆ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಉಡುಪಿಯಲ್ಲಿ ಎರಡು ವರ್ಷಗಳ ಪ್ಯಾಶನ್ ಡಿಸೈನಿಂಗ್ ತರಬೇತಿ ಪೂರ್ಣಗೊಳಿಸಿದ್ದಾರೆ.ಈ ವೇಳೆ ತಯಾಸಿದ್ದ ವಿಶೇಷ ವಿನ್ಯಾಸದ ಉಡುಪನ್ನು ಬೆಂಗಳೂರು ಹಾಗೂ ಮೈಸೂರು ಮೂಲದ ಮಾಡೆಲಿಂಗ್ ಅಭ್ಯರ್ಥಿಗಳು ಧರಿಸಿ ಮಾಡೆಲಿಂಗ್ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಿದ್ದಾರೆ.ಈ ವೇಳೆ
ಅವರು ಧರಿಸಿದ್ದ ವಸ್ತ್ರ ವಿನ್ಯಾಸಕ್ಕೆ ಪ್ರಥಮ ಸ್ಥಾನ ಲಭಿಸಿದ್ದು, ಡಿಸೈನರ್ ಅನನ್ಯ ವೈದ್ಯ ಅವರನ್ನು ಸಂಸ್ಥೆಯಿಂದ ಅಭಿನಂದಿಸಿ ಗೌರವಿಸಲಾಯಿತು.
ಮುರೂರಿನ ಸಂಭಯ್ಯ ಮತ್ತು ಶಿವಮ್ಮ ದಂಪತಿಗಳ ಮಗಳಾಗಿರುವ ಇವರು ಡಿಸೈನಿಂಗ್ ಕ್ಷೇತ್ರದಲ್ಲಿ ಇನ್ನಷ್ಟು ಸಾದನೆ ಮಾಡುವಂತಾಗಲಿ ಎಂದು, ಗುರುಗಳು, ಕುಟುಂಬದದವರು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ.