ಚೆನ್ನೈ ಜುಲೈ 17: ತಮಿಳುನಾಡಿನಲ್ಲ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ಭಾರೀ ಜೋರಾಗಿಯೇ ನಡೆಯುತ್ತಿದೆ, ಎಂ.ಕೆ ಸ್ಟಾಲಿನ್ ಸರ್ಕಾರದ ಸಚಿವರು ಈ ದಾಳಿಗೆ ಒಳಗಾಗಿದ್ದಾರೆ. ಇದೀಗ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಸಿದಂತೆ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಅವರು ಮೇಲೆ ಇ.ಡಿ ದಾಳಿ ನಡೆದಿದೆ. ಚೆನ್ನೈ ಮತ್ತು ವಿಲ್ಲುಪುರಂ ಜಿಲ್ಲೆಗಳಲ್ಲಿರುವ ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಜತೆಗೆ ಅವರ ಪುತ್ರ ಹಾಗೂ ಸಂಸದ ಗೌತಮ್ ಸಿಗಮಣಿ ಅವರ ಮನೆಯಲ್ಲೂ ಹುಡುಕಾಟ ನಡೆದಿದೆ.
ಸಚಿವ ಕೆ ಪೊನ್ಮುಡಿ ಅವರಿಗೆ ಸಂಬಂಧಿಸಿದ 9 ಸ್ಥಳಗಳಲ್ಲಿ ಇ.ಡಿ ಶೋಧ ಕಾರ್ಯವನ್ನು ಮಾಡುತ್ತಿದ್ದು, ಕೇಂದ್ರ ಭದ್ರತಾ ಪಡೆಯ ಜತೆಗೆ ಸೇರಿ ಇ.ಡಿ ಕಾರ್ಯಚರಣೆಯನ್ನು ನಡೆಸುತ್ತಿದೆ. ಈ ಹಿಂದೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇಂಧನ ಮತ್ತು ಅಬಕಾರಿ ಇಲಾಖೆ ಸಚಿವ ವಿ ಸೆಂಥಿಲ್ ಬಾಲಾಜಿ ಅವರು ಮೇಲೆ ಇ.ಡಿ ದಾಳಿ ನಡೆಸಿ, ಅನೇಕ ಕಡೆ ಶೋಧ ಕಾರ್ಯವನ್ನು ನಡೆಸಿತ್ತು. ಅವರ ಆಪ್ತರ ಮೇಲೂ ಇ.ಡಿ ದಾಳಿ ನಡೆಸಿತ್ತು. ಜೂ.14ರಂದು ವಿ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿ, ಈಗ ತನಿಖೆ ನಡೆಸುತ್ತಿದೆ.
ಇದೀಗ ವಿ ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿದ ನಂತರ ತಮಿಳುನಾಡಿನ ಸರ್ಕಾರದ ಸಚಿವರ ಮೇಲೆ ಇ.ಡಿ ಒಂದು ಕಣ್ಣಿಟ್ಟಿದ್ದು, ಅವರ ವ್ಯವಹಾರಗಳ ಮೇಲೆ ಗಮನ ನೀಡಿದೆ. ಇದರ ಜತೆಗೆ ಈಗಾಗಲೇ ವಿ ಸೆಂಥಿಲ್ ಬಾಲಾಜಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಆದೇಶವನ್ನು ರಾಜ್ಯಪಾಲರು ತಡೆಹಿಡಿದಿದ್ದು, ಕಾನೂನು ಕ್ರಮಗಳನ್ನು ಬಗ್ಗೆ ತಿಳಿದುಕೊಂಡು ರಾಜೀನಾಮೆ ಪಡೆಯಬೇಕೇ? ಬೇಡವೇ? ಎಂಬುದನ್ನು ನಿರ್ಧಾರಿಸುತ್ತೇವೆ ಎಂದು ಹೇಳಿದ್ದಾರೆ. ಈ ಸಮಯದಲ್ಲೇ ಇನ್ನೊಬ್ಬ ಸಚಿವ ಮೇಲೆ ಇ.ಡಿ ದಾಳಿ ನಡೆದಿದೆ. ಇದು ರಾಜಕೀಯ ಎಂದು ಸ್ಟಾಲಿನ್ ಸರ್ಕಾರ ಹೇಳುತ್ತಿದೆ.