ದಾಂಡೇಲಿ : ವೈದ್ಯರಿಲ್ಲದ ಸಮಾಜವನ್ನು ಉಹಿಸಲು ಸಾಧ್ಯವಿಲ್ಲ. ಕೋವಿಡ್ ಸಂಕಷ್ಟದ ಸಮಯದಲ್ಲಿ ದೇವರ ರೂಪದಲ್ಲಿ ಬಂದು ಕೋಟ್ಯಾಂತರ ಜನರ ಜೀವವನ್ನು ಉಳಿಸಿದ ಕೀರ್ತಿ ವೈದ್ಯರುಗಳಿಗೆ ಸಲ್ಲುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಮಹತ್ವಪೂರ್ಣವಾಗಿದೆ ಎಂದು ಚಿತ್ರದುರ್ಗದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬಿ.ಕೆ.ರಶ್ಮಿಯವರು ಹೇಳಿದರು.
ಅವರು ನಗರದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಿವಜ್ಯೋತಿ ರಾಜಯೋಗ ಭವನದಲ್ಲಿ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವೈದ್ಯರ ಸೇವೆಗೆ ಬೆಲೆ ಕಟ್ಟಲಾಗದು. ಈ ನಿಟ್ಟಿನಲ್ಲಿ ಜೀವ ಉಳಿಸುವ ವೈದ್ಯರನ್ನು ಗೌರವಿಸುವುದು ನಮ್ಮ ಕರ್ತವ್ಯವು ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರದ ಖಾಸಗಿ ಹಾಗೂ ಸರಕಾರಿ ವೈದ್ಯರುಗಳಾದ ಡಾ.ಜಿ.ವಿ.ಭಟ್, ಡಾ.ಎಂ.ವಿ.ಕಾಮತ್, ಡಾ.ಎಸ್.ಎಲ್.ಕರ್ಕಿ, ಡಾ.ನಾಗವೇಣಿ ಸಂಗಪ್ಪ ಗಾಬಿ, ಡಾ.ವಿಜಯಕುಮಾರ್ ಕೊಚ್ಚರಗಿ, ಡಾ.ಪ್ರಭು ಪ್ರಸಾದ, ಡಾ.ಅರುಣ್ ಕುಮಾರ್, ಡಾ.ಅನೂಪ್ ಮಾಡ್ದೋಳ್ಕರ್, ಡಾ.ಬಿ.ಕೆ.ಪಾಟೀಲ್, ಡಾ.ರೇಖಾ ಹೆಗಡೆ, ಡಾ.ಸುಬ್ರಹ್ಮಣ್ಯ ಬಂಟ್, ಡಾ.ಕೀರ್ತಿಯವರನ್ನು ಹಾಗೂ ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರೋಹಿಣಿ.ಡಿ.ಬಸಾಪುರ ಮತ್ತು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದ ನಗರದ ಶ್ರೀನಿಧಿ ಗುರುಶಾಂತ್ ಜಡೆಹಿರೇಮಠ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯ್ತು.
ನಗರದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ಗೀತಕ್ಕ ಅವರು ಸ್ವಾಗತಿಸಿ, ವಂದಿಸಿದರು.