ಚಾಮರಾಜನಗರ: ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮದುವನಹಳ್ಳಿಯಲ್ಲಿ ಕೌಟುಂಬಿಕ ಕಲಹ ಹಿನ್ನಲೆ ಪತ್ನಿ ಶೀಲ ತನ್ನ ಇಬ್ಬರು ಮಕ್ಕಳಾದ ಯಶವಂತ್ ಹಾಗೂ ಸಿಂದುಗೆ ವಿಷ ಉಣಿಸಿ ಕೊನೆಗೆ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶೀಲ ಹಾಗೂ ಮಾದೇಶನಿಗೆ ಕಳೆದ 11 ವರ್ಷದ ಹಿಂದೆ ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿ ಕೊಡಲಾಗಿತ್ತು. ಮಾದೇಶ ಕೂಲಿ ನಾಲಿ ಮಾಡಿಕೊಂಡು ಸಂಸಾರದ ನೌಕೆಯನ್ನ ಸಾಗಿಸುತ್ತಿದ್ದ. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಸಿಂದು ಹಾಗೂ ಯಶವಂತ್ ಎಂಬ ಎರಡು ಮಕ್ಕಳು ಸಹ ಆಗಿದ್ದವು. ಆದ್ರೆ, ಅದೇನಾಯ್ತೊ ಎನೋ ಬರ ಬರುತ್ತ ಮಾದೇಶ್ ಮದ್ಯದ ದಾಸನಾಗಿಬಿಟ್ಟ.
ದಿನ ನಿತ್ಯ ಕುಡಿದುಕೊಂಡು ಬಂದು ಹೆಂಡತಿ ಜೊತೆ ಕಿರಿಕ್ ಮಾಡುತ್ತಿದ್ದ. ಸಾಲದು ಎಂದು ಕಳೆದೊಂದು ತಿಂಗಳ ಹಿಂದೆ ಎಣ್ಣೆ ಏಟಲ್ಲಿ ನಡೆದುಕೊಂಡು ಬರುವಾಗ ಆಯ ತಪ್ಪಿ ಬಿದ್ದು, ಕಾಲು ಮುರಿದು ಕೊಂಡಿದ್ದ. ಪತ್ನಿ ಶೀಲ ಕೂಲಿ ಮಾಡ್ಕೊಂಡು ಬಂದು ಜೀವನ ಸಾಗಿಸುತ್ತಿದ್ದಳು. ಆದ್ರೆ, ಆಕೆ ತಂದ ಕೂಲಿ ಹಣವನ್ನ ಸಹ ಮಾದೇಶ ಕಿತ್ತುಕೊಂಡು ಮದ್ಯಪಾನ ಮಾಡುತ್ತಿದ್ದ. ಇದರಿಂದ ಬೇಸತ್ತ ಶೀಲ ನಿನ್ನೆ(ಜು.12) ಬೆಳಗ್ಗೆ ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ತಾನು ವಿಷ ಕುಡಿದಿದ್ದಾಳೆ.
ಈ ವಿಚಾರ ತಿಳಿದ ಅಕ್ಕ ಪಕ್ಕದ ಮನೆಯವರು ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಯ್ತಾದರೂ, 6 ವರ್ಷದ ಸಿಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ರೆ, ಇತ್ತ ಶೀಲ ಹಾಗೂ ಯಶವಂತ್ ಗೆ ಚಿಕಿತ್ಸೆ ಮುಂದುವರೆಸಲಾಗಿದ್ದು, ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಶೀಲ ಹಾಗೂ ಯಶವಂತ್ರನ್ನ ಮೈಸೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಈ ಕುರಿತು ಕೊಳ್ಳೆಗಾಲ ಗ್ರಾಮಾಂತರ ಠಾಣಾ ಪೊಲೀಸರು ಐಪಿಸಿ 302 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಇತ್ತ ತಲೆ ಮರೆಸಿಕೊಂಡಿರುವ ಪತಿ ಮಾದೇಶನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.