ಅಂಗಡಿಯವನಿಂದ 50 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿಯ ಬಂಧನ

ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗೋಲ್‌ಪುರಿ ಪ್ರದೇಶದಲ್ಲಿ ಅಂಗಡಿಯವರಿಂದ 50,000 ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಸಿಬಿಐ ಅವರನ್ನು ಬಂಧಿಸಿದೆ.

ಪರಾರಿಯಾಗಲು ಯತ್ನಿಸುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿಯನ್ನು ಸಿಬಿಐ ಹೇಗೆ ಬಂಧಿಸಿತು ಎಂಬ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿನ ಅಂಗಡಿಯವರೊಬ್ಬರು ಗಾಡಿಯನ್ನು ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದಕ್ಕಾಗಿ ಹೆಡ್ ಕಾನ್​ಸ್ಟೆಬಲ್ ಅಂಗಡಿಯವರಿಂದ 50 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಹೀಗಾಗಿ ಅಂಗಡಿ ಮಾಲೀಕ ಸಿಬಿಐ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಪೊಲೀಸರ ಬೇಡಿಕೆಯಿಂದ ಅಸಮಾಧಾನಗೊಂಡ ಅಂಗಡಿಯವನು ಸಿಬಿಐ ಸಹಾಯವನ್ನು ಕೇಳಿದ್ದರು.

ಅಂಗಡಿಯ ಮಾಲೀಕರ ದೂರಿಗೆ ಸಿಬಿಐ ತ್ವರಿತವಾಗಿ ಸ್ಪಂದಿಸಿತು ಮತ್ತು ಆರೋಪಗಳ ತನಿಖೆಗೆ ಕಾರ್ಯಾಚರಣೆಯನ್ನು ನಡೆಸಿತು.

ಕಾರ್ಯಾಚರಣೆ ವೇಳೆ ಲಂಚ ಪಡೆಯುತ್ತಿದ್ದ ಪೊಲೀಸ್ ಅಧಿಕಾರಿ ಭೀಮ್ ಸಿಂಗ್ ಅವರನ್ನು ಸಿಬಿಐ ತಂಡ ಹಿಡಿದಿತ್ತು. ತನ್ನ ಮೇಲೆ ದಾಳಿ ನಡೆಯುತ್ತಿದೆ ಎಂದು ತಿಳಿದಾಗ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು ಆದರೆ ಸಿಬಿಐ ತಂಡವು ಬಂಧಿಸಿತು. ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ಸಿಬಿಐ ಲಂಚ ಪ್ರಕರಣ ದಾಖಲಿಸಿದೆ.