ಕುಮಟಾ : ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವ ಮೂಲಕ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಹುಲ್ ಗಾಂಧಿಯವರ ಸತ್ಯದ ಮಾತುಗಳನ್ನು ಸಹಿಸಿಕೊಳ್ಳದ ಪ್ರಧಾನಿ ಮೋದಿ ಸೇಡಿನ ಕ್ರಮ ಕೈಗೊಂಡಿದ್ದಾರೆಂದು ಆರೋಪಿಸಿ ಕುಮಟಾ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಬುಧವಾರ ಕಾಂಗ್ರೆಸ್ ಪ್ರಮುಖರು ಮೌನ ಪ್ರತಿಭಟನೆ ನಡೆಸಿದರು.
ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿಯವರ ವಿರುದ್ಧದ ರಾಜಕೀಯ ಷಡ್ಯಂತ್ರವನ್ನು ಖಂಡಿಸಿ ಮೌನ ಪ್ರತಿಭಟನೆ ಆರಂಭಿಸಿದರು.
ಈ ಮೌನ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಮುಖರಾದ ಭುವನ್ ಭಾಗ್ವತ್, ಆರ್. ಎಚ್.ನಾಯ್ಕ, ನಾಗರಾಜ ಮಡಿವಾಳ, ನಾಗೇಶ ನಾಯ್ಕ, ಗಜು ನಾಯ್ಕ, ನಾಗರಾಜ ಹಿತ್ತಲಮಕ್ಕಿ, ಮಧುಸೂದನ ಶೇಟ್, ವೀಣಾ ನಾಯಕ, ವಿ.ಎಲ್ ನಾಯ್ಕ, ನಾಗರಾಜ ನಾಯ್ಕ, ಪ್ರದೀಪ್ ನಾಯಕ, ಪ್ರಾನ್ಸಿಸ್ ಫರ್ನಾಂಡಿಸ್, ಮುಜಾಫರ್ ಶೇಕ್, ಶಶಿಕಾಂತ ನಾಯ್ಕ, ನಾಗರಾಜ್ ನಾಯ್ಕ, ಧೀರು ಶಾನಭಾಗ, ವಿ.ಎಲ್ ನಾಯ್ಕ, ಯೋಗಾನಂದ ಗಾಂಧಿ, ವೆಂಕಟೇಶ್ ನಾಯ್ಕ, ಬಾಬು ಸಾಹೇಬ್, ಜಗದೀಶ್ ಹರಿಕಾಂತ, ಶಿವರಾಂ ಹರಿಕಾಂತ್, ಭಾರತಿ ಪಟಗಾರ, ಸುರೇಖಾ ವಾರೆಕರ, ನಾಗವೇಣಿ ಮುಕ್ರಿ, ನಾರಾಯಣ ಉಪ್ಪಾರ್ ಹಾಗೂ ಇನ್ನೂ ಅನೇಕ ಪಕ್ಷದ ಕಾರ್ಯಕರ್ತರು ಭಾಗಹಿಸಿದ್ದರು.