ಮಕ್ಕಳ ಮೇಲೆ ಪೋಷಕರ ನಿರ್ಲಕ್ಷ್ಯ; 5 ಬಾರಿ ಮನೆ ಬಿಟ್ಟು ಹೋಗಿದ್ದ 12 ವರ್ಷದ ಬಾಲಕ ಸಿಕ್ಕಿದ್ದು ಹೇಗೆ?

ಹಾವೇರಿ: ಮಕ್ಕಳಿಗೆ ತಂದೆ-ತಾಯಿಯ ಪ್ರೀತಿ ಬಹಳ ಮುಖ್ಯ, ಆದರೆ ಇತ್ತೀಚೆಗೆ ಪೋಷಕರು ತಮ್ಮದೆ ಮೊಜು ಮಸ್ತಿಯಲ್ಲಿ ತೊಡಗಿರುತ್ತಾರೆ. ನಿರ್ಲಕ್ಷ್ಯ ಮಾಡುವುದರಿಂದ ಮಕ್ಕಳು ಮಾನಸಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಹುಬ್ಬಳ್ಳಿ ಮೂಲದ 12 ವರ್ಷದ ಬಾಲಕನೊಬ್ಬ ಪೋಷಕರ ನಿರ್ಲಕ್ಷ್ಯತನದಿಂದ ಮಾನಸಿಕ ರೋಗಕ್ಕೆ ತುತ್ತಾಗಿದ್ದು, ಐದು ಬಾರಿ ಮನೆಯಿಂದ ಪರಾರಿಯಾಗಿದ್ದಾನೆ. ಸದ್ಯ ಈಗ ಅಜ್ಜಿಯ ಮನೆ ಸೇರಿದ್ದಾನೆ.

ಗಗನ್ ಎಂಬ 12 ವರ್ಷದ ಬಾಲಕ ತಂದೆಯ ಜೊತೆ ಜಗಳ ಮಾಡಿ ತಂದೆಯ ಮೊಬೈಲ್ ಕಸಿದುಕೊಂಡು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಸ್ ಹತ್ತಿದ್ದ. ತಂದೆಯ ಫೋನ್ ನಿಂದ ಫೋನ್ ಪೆ ಮಾಡಿ ಟಿಕೆಟ್ ಪಡೆದಿದ್ದ. ಮೊಬೈಲ್​ಗೆ ಎಷ್ಟೇ ಕಾಲ್ ಬಂದ್ರೂ ರಿಸಿವ್ ಮಾಡದೆ ಇದ್ದಾಗ ಪಕ್ಕದಲ್ಲಿ ಇದ್ದವರು ಫೋನ್ ತಗೊಂಡು ರಿಸಿವ್ ಮಾಡಿದ್ದಾರೆ. ಆಗ ಆತ ನನ್ನ ಮೊಮ್ಮಗ ಆತ ತಪ್ಪಿಸಿಕೊಂಡಿದ್ದಾನೆ. ಪ್ಲೀಸ್ ಆತನನ್ನು ಎಲ್ಲಿಗೂ ಬಿಡಬೇಡಿ ಅಂತ ಬಾಲಕನ ಅಜ್ಜಿ ಮನವಿ ಮಾಡಿದ್ದಾರೆ. ಬಸ್ ಹಾವೇರಿಗೆ ಬರುತ್ತಿದ್ದಂತೆ ಅಬ್ದುಲ್ ಖಾದರ್ ಎಂಬುವವರು ಬಾಲಕನನ್ನು ಹಾವೇರಿ ನಗರ ಸ್ಟೇಷನ್ ಗೆ ಒಪ್ಪಿಸಿ ಅಜ್ಜಿ ಮತ್ತು ಮೊಮ್ಮಗನನ್ನು ಒಂದು ಮಾಡಿದ್ದಾರೆ.

ಈ ಬಾಲಕನ ಅದೃಷ್ಟ ಎಷ್ಟು ಗಟ್ಟಿಯಾಗಿದೆ ಅಂದ್ರೆ, ಕಳೆದ ಒಂದು ವರ್ಷದಿಂದ ಐದು ಬಾರಿ ಮನೆಯಿಂದ ಓಡಿ ಹೋಗಿದ್ದಾನೆ. ಆದ್ರೆ ದೇವರ ರೂಪದಲ್ಲಿ ಅದೆಷ್ಟೊ ಜನ ಬಂದು ಆತನನ್ನು ರಕ್ಷಿಸಿದ್ದಾರೆ. ಈತ ಈ ರೀತಿ ಮಾಡಲು ಮೂಲ ಕಾರಣ ಚಿಕ್ಕವನಿದ್ದಾಗಿನಿಂದಲೂ ಮನೆಯಲ್ಲಿ ತಂದೆ ತಾಯಿಯ ನಿರ್ಲಕ್ಷ್ಯ, ಡೈವರ್ಸ್ ಮಾಡಿಕೊಂಡು ತಾಯಿ ಇತನನ್ನು ಅನಾಥ ಮಾಡಿದ್ರೆ, ತಂದೆ ಏನಾದ್ರು ಮಾಡಿಕೊಳ್ಳಲಿ ಅಂತಾ ಇತನ ಬಗ್ಗೆ ತಲೆನೇ ಕೆಡಿಸಿಕೊಳ್ಳುತ್ತಿಲ್ಲ. ಅಜ್ಜಿಯ ಜೊತೆ ಇರುವ ಈ ಬಾಲಕ ಎಲ್ಲರಂತೆ ನಂಗೆ ಪೋಷಕರು ಇದಾರೆ ಬಟ್ ಪ್ರೀತಿ ಇಲ್ಲ ಅಂತಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆ.