ಕಾರವಾರ: ರಾಜ್ಯದಲ್ಲಿ ದಿನನಿತ್ಯ ಬಳಕೆಯ ಎಲ್ಲ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ತರಕಾರಿ, ದಿನಸಿ ಸಾಮಾಗ್ರಿ ಹಾಗೂ ತಿನ್ನುವ ಎಲೆಗಳ ಬೆಲೆ ದುಬಾರಿಯಾಗಿದ್ದು ಜನರು ಹೈರಾಣಾಗಿದ್ದಾರೆ. ಕರುನಾಡಿನಲ್ಲಿ ಮಳೆ ಅಭವಾದಿಂದ ಇಳುವರಿ ಕಡಿಮೆಯಾದ ಹಿನ್ನೆಲೆ ಬೆಲೆಗಳು ಗಗನಕ್ಕೆ ಏರಿವೆ. ಇದೀಗ ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನುಗಳ ಬೆಲೆ ಕೂಡ ಏರಿಕೆಯಾಗಿದೆ.
ಜೂನ್ ಮತ್ತು ಜುಲೈ ಎರಡು ತಿಂಗಳಲ್ಲಿ ಮೀನು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಮತ್ತು ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿರುವುದರಿಂದ ಯಾಂತ್ರೀಕೃತ ಮೀನುಗಾರಿಕೆ ಮತ್ತು ಸಂಪ್ರದಾಯಿಕ ಮೀನುಗಾರಿಕೆ ರಾಜ್ಯ ಸರ್ಕಾರ ಜೂನ್ 1 ರಿಂದ ಜುಲೈ 30ರ ವರಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಹೇರಿದೆ. ಈ ಹಿನ್ನಲೆ ಮೀನುಗಳ ಬೆಲೆ ಹೆಚ್ಚಿದೆ.
ಮೀನುಗಾರಿಕೆ ಇಲ್ಲದ ಪರಿಣಾಮ ತಾಜಾ ಮೀನುಗಳ ಬೆಲೆ ಗಗನಕ್ಕೆ ಏರಿದೆ. ತಾಜಾ ಮೀನುಗಳ ಬೆಲೆ ಏರಿಕೆ ಹಿನ್ನಲೆ ಮೀನು ಪ್ರೀಯರು ಒಣ ಮೀನುಗಳನ್ನು ಖರೀದಿ ಮಾಡುತ್ತಿದ್ದಾರೆ.
- ಒಂದು ದೊಡ್ಡ (100 ಗ್ರಾಂ) ಬಾಂಗಡೆ 80 ರೂ. (ಮೊದಲಿನ ದರ 50 ರೂ.)
- ಕೊಕ್ಕರೆ 1ಕೆಜಿಗೆ 320 ರೂ (ಮೊದಲಿನ ದರ 150 ರೂ.)
- ಇಸ್ವಾಣ 1 ಕೆಜಿಗೆ 450 ರೂ. (ಮೊದಲಿನ ದರ 300 ರೂ.)
- ಭೂತಾಯಿ 100 ರೂಗೆ ನಾಲ್ಕು ಮೀನು (ಮೊದಲು ಹತ್ತು ಕೊಡಲಾಗುತ್ತಿತ್ತು)
- ಪಾಂಪ್ಲೆಟ್ 1ಕೆಜಿಗೆ 1500 ರೂ. (ಮೊದಲು 700 ರಿಂದ 800 ರೂ.)
- ಭೂ ತಾಯಿ ಮೀನು 1ಕೆಜಿಗೆ 400 ರೂ. (ಮೊದಲಿನ ದರ 250 ರೂ.)