ಚಿಕ್ಕಬಳ್ಳಾಪುರ (ಜು.7) : ಶಾಲೆಯ ಸಹಶಿಕ್ಷಕಿಗೆ ಸಹೋದ್ಯೋಗಿಯಿಂದಲೇ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯ ಆಚಾರ್ಯ ಪ್ರೌಢಶಾಲೆಯಲ್ಲಿ ನಡೆದಿದೆ.
ಆರ್ ರಂಗಧಾಮಯ್ಯ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ. ಶಾಲೆಯಲ್ಲಿ ಶಿಕ್ಷಕಿಯರ ವಿಶ್ರಾಂತಿ ಕೊಠಡಿಗೆ ಆಗಮನಿಸಿ ಕಿರುಕುಳ ನೀಡುತ್ತಿದ್ದಾನೆಂದು ಶಿಕ್ಷಕಿ ಆರೋಪಿಸಿದ್ದಾಳೆ. ಅಲ್ಲದೇ. ದಿನನಿತ್ಯ ಶಾಲೆಯ ದಿನವಹಿ ದಾಖಲಾತಿಗಳನ್ನು ನೀಡುವ ವಿಷಯಕ್ಕೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಮನೆಗೆ ಬಂದರೆ ಮಾತ್ರ ಶಾಲೆಯ ದಾಖಲಾತಿಗಳನ್ನು ನೀಡುವುದಾಗಿ ಹೇಳುತ್ತಾನೆ. ಸಹ ಶಿಕ್ಷಕಿ ಹೋದ ಕಡೆಯೆಲ್ಲಾ ಬೆನ್ನಟ್ಟಿ ಪ್ರೀತಿಸುವಂತೆ ಪೀಡಿಸುತ್ತಿರುವುದಾಗಿ ಆರೋಪಿಸಿರುವ ಶಿಕ್ಷಕಿ.
ಸಹಶಿಕ್ಷಕನ ಕಿರುಕುಳಕ್ಕೆ ಬೇಸತ್ತು ರಕ್ಷಣೆಗೆ ಪೊಲೀಸರ ಮೊರೆ ಹೋಗಿರುವ ಶಿಕ್ಷಕಿ. ಸದ್ಯ ಈ ಪ್ರಕರಣ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿ.ಸಿ ಸೆಕ್ಷನ್ 354(A),354(D),504 ರಡಿ ಪ್ರಕರಣ ದಾಖಲು. ಪ್ರಕರಣ ದಾಖಲಾಗಿದೆ.
ಮಡಿಕೇರಿ: ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ, ವಕೀಲ ಕೃಷ್ಣಮೂರ್ತಿ ಅವರಿಗೆ ಬೆದರಿಕೆ ಬಂದಿದ್ದು, ಬೆದರಿಕೆ ಪತ್ರದ ಕೊನೆಯಲ್ಲಿ ನಕ್ಸಲ್ ಪರ ಜಿಂದಾಬಾದ್ ಪದ ಉಲ್ಲೇಖವಾಗಿದ್ದು, ಈ ಬಗ್ಗೆ ಕೃಷ್ಣಮೂರ್ತಿ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೋಸ್ಟ್‌ನಲ್ಲಿ ಬೆದರಿಕೆ ಪತ್ರ ಬಂದಿದ್ದು, ಈ ಪತ್ರ ಓದಲು ನೀನು ಬದುಕಿರುವುದಕ್ಕೆ ಅಭಿನಂದನೆ, ಗೌರಿ ಕೊಂದವರಿಗೆ ನಮ್ಮ ಸರ್ಕಾರ ಇದ್ದಾಗ ಶಿಕ್ಷೆ ನೀಡಿದ್ದೇವೆ. ಆರೋಪಿತರ ಬಿಡುಗಡೆ ಪ್ರಯತ್ನ ತಕ್ಷಣ ನಿಲ್ಲಿಸು, ಇದಕ್ಕಾಗಿ ಕೊಟ್ಟಎಚ್ಚರಿಕೆ ವಿಫಲ ಆಗಿದ್ದಕ್ಕೆ ಖುಷಿ ಬೇಡ, ಇದು ನಾವು ಕೊಟ್ಟಎಚ್ಚರಿಕೆ ಅಷ್ಟೇ. ತಕ್ಷಣ ನೀನು ಹಿಂದೆ ಸರಿಯದಿದ್ದರೆ ಮಣ್ಣನ್ನು ಕೆಂಪಗಾಗಿಸುತ್ತೇವೆ ಎಂದು ಉಲ್ಲೇಖಿಸಲಾಗಿದೆ.
ಗುರುವಾರ ಪೋಸ್ಟ್‌ನಲ್ಲಿ ಕೃಷ್ಣಮೂರ್ತಿ ಅವರಿಗೆ ಪತ್ರ ತಲುಪಿದೆ. ಈ ಹಿಂದೆ ಏ. 12 ರಂದು ಕೃಷ್ಣಮೂರ್ತಿ ಮೇಲೆ ಗುಂಡಿನ ದಾಳಿ ನಡೆದು, ಗುಂಡಿನ ದಾಳಿಯಲ್ಲಿ ಕೃಷ್ಣಮೂರ್ತಿ ಪಾರಾಗಿದ್ದರು. ವಕೀಲರೂ ಆಗಿರುವ ಕೃಷ್ಣಮೂರ್ತಿ ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವವರÜ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.