ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಶರಣಾದ ಹಾಂಗ್ ಕಾಂಗ್ ಮೂಲದ ಗಾಯಕಿ

ತನ್ನ ಗಾಯನದಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದ ಹಾಂಗ್ ಕಾಂಗ್ ಮೂಲದ ಗಾಯಕಿ ಮತ್ತು ಸಾಹಿತಿ ಕೊಕೊ ಲೀ(48) ಕೆಲವು ತಿಂಗಳುಗಳಿಂದ ಮಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇದೀಗಾ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಸಹೋದರಿ ಬುಧವಾರ ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ತನ್ನ 48ನೇ ವಯಸ್ಸಿನ್ಲಲಿಯೇ ಅಮೆರಿಕದಾದ್ಯಂತ  ಮಧುರ ಕಂಠದಿಂದಲೇ ಮೋಡಿ ಮಾಡಿದ್ದ ಕೊಕೊ ಲೀ ಮಾನಸಿಕವಾಗಿ ಕೆಲವು ತಿಂಗಳುಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದೀಗಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಾಕಿಂಗ್​​ ಸುದ್ದಿ ಹರಿದಾಡುತ್ತಿದ್ದು, ಆಕೆಯ ಅಭಿಮಾನಿಗಳು ಕಂಬನಿ ಮಿಡಿದ್ದಾರೆ.

ಆತ್ಮಹತ್ಯೆಯ ಕುರಿತು ಲೀ ಅವರ ಹಿರಿಯ ಸಹೋದರಿಯರಾದ ಕರೋಲ್ ಮತ್ತು ನ್ಯಾನ್ಸಿ ಲೀ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದಿತ್ಯವಾರದಂದು ಲೀ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕೋಮಾ ಸ್ಥಿತಿಯಲ್ಲಿದ್ದ ಆಕೆ ಬುಧವಾರ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಹಾಂಗ್ ಕಾಂಗ್‌ನಲ್ಲಿ ಫೆರೆನ್ ಜನಿಸಿದ ಲೀ, ನಂತರ ಅಮೆರಿಕದಲ್ಲಿ ವ್ಯಾಸಂಗ ಮುಗಿಸಿದ್ದರು. ಹಾಂಗ್ ಕಾಂಗ್‌ನಲ್ಲಿ ಬ್ರಾಡ್‌ಕಾಸ್ಟರ್ ಟಿವಿಬಿ ನಡೆಸಿದ ವಾರ್ಷಿಕ ಗಾಯನ ಸ್ಪರ್ಧೆಯಲ್ಲಿ ಮೊದಲ ರನ್ನರ್-ಅಪ್ ಗೆದ್ದ ನಂತರ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದರು. 1994 ರಲ್ಲಿ ತನ್ನ ಮೊದಲ ಆಲ್ಬಂ ಅನ್ನು 19 ನೇ ವಯಸ್ಸಿನಲ್ಲಿ ಬಿಡುಗಡೆ ಮಾಡಿದ್ದರು.

ಆರಂಭದಲ್ಲಿ ಪಾಪ್ ಗಾಯಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದ ಲೀ ನಂತರ ಸುಮಾರು 30 ವರ್ಷಗಳ ವೃತ್ತಿಜೀವನದಲ್ಲಿ ಕ್ಯಾಂಟೋನೀಸ್ ಮತ್ತು ಇಂಗ್ಲಿಷ್‌ನಲ್ಲಿ ಸಾಕಷ್ಟು ಆಲ್ಬಮ್‌ಗಳನ್ನು ಬಿಡುಗಡೆ ಮಾಡಿದರು. 2011 ರಲ್ಲಿ, ಕೆನಡಾದ ಉದ್ಯಮಿ ಬ್ರೂಸ್ ರಾಕೊವಿಟ್ಜ್ ಅವರನ್ನು ವಿವಾಹವಾಗಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಲೀ, ಯರೊಂದಿಗೂ ಬೆರೆಯುತ್ತಿರಲ್ಲಿಲ್ಲ ಎಂದು ಆಕೆಯ ಆಪ್ತರು ಹೇಳಿಕೊಂಡಿದ್ದಾರೆ. ಆದರೆ ಆಕೆಯ ಖಿನ್ನತೆಗೆ ಕಾರಣವೆನೆಂದು ಇನ್ನೂ ತಿಳಿದಿಲ್ಲ.