ಇಸ್ಲಾಮಾಬಾದ್: ಕಬಡ್ಡಿ ಭಾರತದ ಪ್ರಮುಖ ಆಟಗಳಲ್ಲಿ ಒಂದು, ಇದನ್ನು ಸಂಪ್ರದಾಯಕ ಆಟ ಎಂದು ಕರೆಯುತ್ತಾರೆ. ಇದಕ್ಕಾಗಿ ಒಂದು ಅಸೋಸಿಯೇಷನ್ ಕೂಡ ಇದೆ. ಕಬಡ್ಡಿ ಅಂತರಾಷ್ಟ್ರೀಯ ಆಟಗಳಲ್ಲಿ ಒಂದಾಗಿದೆ. ಈ ಕಬಡ್ಡಿಯನ್ನು ಪಾಕಿಸ್ತಾನದಲ್ಲಿ ಭಾರತಕ್ಕಿಂತ ವಿಭಿನ್ನವಾಗಿದೆ ಆಡುತ್ತಾರೆ. ಇಂತಹ ಆಟ ಆಡಿದ್ದರೆ ಸಾವು ಖಂಡಿತ ಎಂದು ಅನೇಕ ಕಮೆಂಟ್ ಕೂಡ ಮಾಡಿದ್ದಾರೆ.
ಭಾರತದ ಕಬಡ್ಡಿ ಆಟ ಪಾಕಿಸ್ತಾನದಲ್ಲಿ ಮಾರ್ಪಡುಗೊಂಡು ‘ತಪ್ಪಡ್’ ಅಥವಾ ಸ್ಲ್ಯಾಪ್ ಕಬಡ್ಡಿ ಎಂದು ಕರೆಯಲಾಗುತ್ತದೆ. ಕಬಡ್ಡಿಯಲ್ಲಿ ಏಳು ಆಟಗಾರರು ಇರುತ್ತಾರೆ. ಆದರೆ ಇದರಲ್ಲಿ ಇಬ್ಬರು ಸ್ಪರ್ಧಿಗಳು ಇರುತ್ತಾರೆ. ಭಾರತೀಯ ಕಬ್ಬಡಿಯಲ್ಲಿರುವ ಹಾಗೆ ಇಲ್ಲಿ ಎರಡು ಟೀಮ್ ಇರುತ್ತಾದೆ. ಕಬ್ಬಡಿಯಲ್ಲಿ ಒಬ್ಬರನ್ನು ಮುಟ್ಟಿದರ ಅಥವಾ ಟಚ್ ಮಾಡಿದರೆ, ಔಟ್ ಎಂದು ಪರಿಗಣಿಸಲಾಗುತ್ತದೆ, ಜತೆಗೆ ಯಾರು ಹೆಚ್ಚು ಅಂಕ ಗಳಿಸುತ್ತಾರೆ ಅವರು ವಿಜಯಶಾಲಿ ಎಂದು ಘೋಷಣೆಯಾಗುತ್ತಾರೆ. ಆದರೆ ಪಾಕಿಸ್ತಾನದ ಸ್ಲ್ಯಾಪ್ ಕಬಡ್ಡಿಯಲ್ಲಿ ಒಬ್ಬರಿಗೊಬ್ಬರು ಹೊಡೆದುಕೊಳ್ಳುವುದು ಈ ಆಟದ ಪ್ರಮುಖ ಅಸ್ತ್ರ, ಅಂದರೆ ಒಬ್ಬ ಸ್ಪರ್ಧಿ ತನ್ನ ಪ್ರತಿಸ್ಪರ್ಧಿಯ ಎದೆಗೆ ಹೊಡೆಯುವುದು, ಒಂದು ವೇಳೆ ಈ ಆಟದಿಂದ ಹಿಂದೆ ಸರಿದರೆ ಅವರು ಔಟ್ ಮತ್ತು ಯಾರು ನಿರಂತರವಾಗಿ ತನ್ನ ಪ್ರತಿಸ್ಪರ್ಧಿಗೆ ಹೊಡೆಯುತ್ತಾರೆ ಅವರು ವಿಜಯಶಾಲಿ ಎಂದು ಹೇಳಲಾಗುತ್ತದೆ.
ಈ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟುವ ಮೂಲಕ ಆಟಗಾರರು ಹಣ ಪಡೆಯುತ್ತಾರೆ. ಇದಕ್ಕೆ ಬಹುಮಾನ ಕೂಡ ನೀಡಲಾಗುತ್ತದೆ. ಇದೀಗ ಎಲ್ಲ ಕಡೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರುದ್ಧ ಉಂಟಾಗಿದೆ.