ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರೆದಿದೆ. ಬೇಲೂರು ತಾಲೂಕಿನ ಅಂಕಿಹಳ್ಳಿಪೇಟೆ ಗ್ರಾಮದ ಕಾಫಿತೋಟದಲ್ಲಿ ಹಿಂಡು ಹಿಂಡಾಗಿ ಕಾಡಾನೆಗಳು ಸಂಚರಿಸುತ್ತಿವೆ.
ಒಂದೇ ಗುಂಪಿನಲ್ಲಿ 30 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ನುಗ್ಗಿ ತೋಟವನ್ನೆಲ್ಲ ನಾಶ ಮಾಡಿದೆ. ಕಾಫಿಯ ಜೊತೆಗೆ ರೈತರು ಬೆಳೆದಿರೋ ಬೆಳೆಗಳನ್ನೆಲ್ಲಾ ತುಳಿದು ಹಾಳು ಮಾಡಿದೆ.
ಕಾಡಾನೆಗಳ ಗುಂಪುನ್ನು ಕಂಡು ಜನ ಆತಂಕಕ್ಕೊಳಗಾಗಿದ್ದಾರೆ. ಸದ್ಯ ಸ್ಥಳೀಯರಿಗೆ ಕಾಡಾನೆಗಳ ಚಲನವಲಗಳ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡ್ತಿದ್ದಾರೆ.
ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದ ಆನೆಗಳು ಯಾವಾಗ ಬೇಗಾದ್ರು ದಾಳಿ ಮಾಡಬಹುದೆಂದು ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಚಲನವಲನವನ್ನು ಟ್ರೇಸ್ ಮಾಡಿ ಸ್ಥಳೀಯರಿಗೆ ಆ ಕಡೆ ಹೋಗದಂತೆ ಎಚ್ಚರಿಸುತ್ತಿದ್ದಾರೆ.
ಹಿಂಡು ಹಿಂಡು ಆನೆಗಳ ಗುಂಪನ್ನು ನೋಡಿ ಆತಂಕದಲ್ಲಿರುವ ಸ್ಥಳೀಯರು ಕಾಡಾನೆಗಳಿಂದ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.