ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಾಲಕಿ ಹಾಗೂ ಆಕೆಯ ಶಿಕ್ಷಕಿ ನಾಪತ್ತೆಯಾಗಿರುವ ಘಟನೆ ರಾಜಸ್ಥಾನದ ಬಿಕಾನೇರ್ನಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯನ್ನು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಿಸುವ ಉದ್ದೇಶದಿಂದ ಶಿಕ್ಷಕಿ ಅಪಹರಿಸಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಪೊಲೀಸರ ಪ್ರಕಾರ, ಅಪ್ರಾಪ್ತ ಬಾಲಕಿಯ ಶಿಕ್ಷಕಿ ನಿದಾ ಬಹ್ಲೀಮ್, ಬಾಲಕಿ ಓದುತ್ತಿದ್ದ ಖಾಸಗಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದಳು. ಶಿಕ್ಷಿಕಿಯ ಕುಟುಂಬದವರು ಪೊಲೀಸರಿಗೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.
ನಾಪತ್ತೆಯು ಪೊಲೀಸ್ ಕೇಸ್ ಮತ್ತು ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳ ಪ್ರತಿಭಟನೆಗೆ ಕಾರಣವಾಯಿತು. ಜೂನ್ 30 ರಂದು 12 ನೇ ತರಗತಿಯ ವಿದ್ಯಾರ್ಥಿನಿ ನಾಪತ್ತೆಯಾದ ನಂತರ ಆಕೆಯ ಪೋಷಕರು ಜುಲೈ 3 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಆಕೆಯ ಪೋಷಕರು ಆಕೆಯ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಿದರೂ ಸುಳಿವು ಸಿಕ್ಕಿರಲಿಲ್ಲ.
ಜೂನ್ 30 ರಂದು ಬಾಲಕಿ ಶಾಲೆಗೆ ಹಾಜರಾಗಲು ತನ್ನ ಮನೆಯಿಂದ ಹೊರಟು ಹೋಗಿದ್ದಳು ಆದರೆ ಅವಳು ಶಾಲೆಗೂ ಹೋಗಿರಲಿಲ್ಲ ಮನೆಗೂ ಮರಳಲಿಲ್ಲ ಎಂದು ಹೇಳಿದ್ದಾರೆ.
ವಿದ್ಯಾರ್ಥಿನಿ ಮತ್ತು ಆಕೆಯ ಶಿಕ್ಷಕರ ಪತ್ತೆಗೆ ಹಲವು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಶಿಕ್ಷಕಿಯು ಆಕೆಯ ಹತ್ತಿರ ಬರಲು ಪ್ರಯತ್ನಿಸುತ್ತಿದ್ದಳು, ಹಾಗೂ ತುಂಬಾ ದಿನಗಳಿಂದ ಅವರಿಬ್ಬರಿಗೆ ಸಂಬಂಧವಿತ್ತು ಎಂದು ಕೂಡ ಆರೋಪಿಸಲಾಗಿದೆ.