ದಾಂಡೇಲಿ : ನಗರದ ಪ್ರತಿಷ್ಟಿತ ಉದ್ಯಮಿ ಹಾಗೂ ಹಿರಿಯ ಸಮಾಜ ಸೇವಕರಾಗಿದ್ದ ಮತ್ತು ಸ್ಥಳೀಯ ಟೌನಶಿಪ್ ನಿವಾಸಿಯಾಗಿರುವ ಎಲ್.ಎಂ.ಲೋಬೋ ಅವರು ಇಂದು ಮಂಗಳವಾರ ವಿಧಿವಶರಾದರು. ಮೃತರಿಗೆ 78 ವರ್ಷ ವಯಸ್ಸಾಗಿತ್ತು.
ಹಿರಿಯ ಗುತ್ತಿಗೆದಾರರಾಗಿ, ಉದ್ಯಮಿಯಾಗಿ ಹಿರಿಯ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಎಲ್.ಎಂ.ಲೋಬೋ ಅವರು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ವಿಶೇಷ ನೆರವನ್ನು ನೀಡುವ ಮೂಲಕ ಗಮನ ಸೆಳೆದಿದ್ದರು. ಸರಳ, ಸಜ್ಜನಿಕೆಯ ವ್ಯಕ್ತಿತ್ವದರಾಗಿದ್ದ ಎಲ್.ಎಂ.ಲೋಬೋ ಅವರು ಪತ್ನಿ, ಓರ್ವ ಸುಪುತ್ರ ಹಾಗೂ ಸುಪುತ್ರಿ ಮತ್ತು ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿ ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.