ರಾಮನಗರ: ಜಿಲ್ಲೆಯಲ್ಲಿ ಇತ್ತೀಚಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ನಿತ್ಯ ಒಂದಲ್ಲ ಒಂದು ಕಡೆ ಆನೆ, ಚಿರತೆ ,ಕರಡಿ ದಾಳಿ ಮಾಡುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಈ ನಡುವೆ ರಾಷ್ಟ್ರೀಯ ಪಕ್ಷಿಯಾಗಿರುವ ನವಿಲು ಮಹಿಳೆ ಮೇಲೆ ದಾಳಿ ಮಾಡಿದೆ.
ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಈಗ ನವಿಲಿನ ಕಾಟ ಶುರುವಾಗಿದೆ. ಕಳೆದ ಒಂದುವಾರದಿಂದ ಗ್ರಾಮದ ಸುತ್ತಮುತ್ತ ನವಿಲುಗಳ ಕಾಟ ಜಾಸ್ತಿಯಾಗಿದೆ. ಗ್ರಾಮದ ಲಿಂಗಮ್ಮ ಎಂಬವರ ಮೇಲೆ ನವಿಲು ದಾಳಿ ಮಾಡಿ ಗಾಯಗೊಳಿಸಿದೆ.
ಮನೆ ಹಿಂಭಾಗದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ನವಿಲು, ಲಿಂಗಮ್ಮನ ಎಡಭಾಗ ಕಣ್ಣಿನ ಮೇಲ್ಭಾಗಕ್ಕೆ ಗಾಯವಾಗಿದೆ. ನವಿಲುಗಳು ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಿ ಗಾಯಗೊಳಿಸ್ತಿವೆ.
ಈ ಸಂಬಂಧ ಅರಣ್ಯ ಇಲಾಖೆಗೆ ನವಿಲು ದಾಳಿ ವಿರುದ್ಧ ದೂರು ನೀಡಲಾಗಿದೆ.