ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕೆಎಸ್ಆರ್ಟಿಸಿ , ಬಿಎಂಟಿಸಿ, ಕೆಕೆಆರ್ಟಿಸಿ, NWRTC ನಾಲ್ಕು ನಿಗಮದ ಸಾರಿಗೆಗಳಲ್ಲಿ ಮಹಿಳೆಯರ ಸಂಚಾರ ಸಂಖೆಯಲ್ಲಿ ಹೆಚ್ಚಳವಾಗಿದೆ. ಆದ್ರೆ, ಕೆಲವೆಡೆ ಗಲಾಟೆಗಳು ನಡೆದಿರುವ ಪ್ರಸಂಗಗಳು ಬೆಳಕಿಗೆ ಬಂದಿವೆ. ಇದಕ್ಕೆ ಪೂರಕವೆಂಬಂತೆ ಕೋಲಾರನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿಸೀಟ್ಗಾಗಿ ಮಹಿಳೆಯರ ನಡುವೆ ಕಿತ್ತಾಟ ನಡೆದಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಕೋಲಾರಿಂದ ಬೆಂಗಳೂರಿಗೆ ತೆರಳುವ ಬಸ್ನಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರ ಕಿತ್ತಾಡಿಕೊಂಡಿದ್ದಾರೆ. ಬಸ್ ಸೀಟು ಹಿಡಿಯಲು ಓರ್ವ ಮಹಿಳೆ ಕಿಟಕಿಯಿಂದ ಬ್ಯಾಗ್ ಹಾಕಿದ್ದಾಳೆ. ಬ್ಯಾಗ್ ಹಾಕಿದ್ದ ಸೀಟ್ನಲ್ಲಿ ಬೇರೆ ಮಹಿಳೆ ಬಂದು ಕುಳಿತ್ತಿದ್ದಕ್ಕೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಸಾಲದಕ್ಕೆ ಸ್ಥಳಕ್ಕೆ ತನ್ನ ಸಂಬಂಧಿಕರನ್ನು ಕರೆಸಿ ಮಹಿಳೆ ದೊಡ್ಡ ಗಲಾಟೆ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಜನರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಅಲ್ಲದೇ ಈ ಗಲಾಟೆ ಪ್ರಕರಣರಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ್ಯದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ, NWRTC ನಾಲ್ಕು ನಿಗಮದ ಸಾರಿಗೆಗಳಲ್ಲಿ ಈವರೆಗೆ ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ 10 ಕೋಟಿ ಸನಿಹದಲ್ಲಿದೆ. ಇದರಿಂದ ಸಾರಿಗೆ ನಿಗಮಗಳಲ್ಲಿ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 222 ಕೋಟಿ ರೂಪಾಯಿ ದಾಟಿದೆ.
ಯೋಜನೆ ಘೋಷಣೆ ಮಾಡದ ಆರಂಭದಲ್ಲಿ ರಾಜ್ಯದ ಹಲವೆಡೆ ಮಹಿಳಾ ಪ್ರಯಾಣಿಕರು ಹಾಗೂ ಕಂಡಕ್ಟರ್-ಚಾಲಕರ ನಡುವೆ ವಾಗ್ವಾದಗಳು, ಗಲಾಟೆಗಳು ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.