ನವದೆಹಲಿ: ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ 19 ಸದಸ್ಯರನ್ನು ಒಂದು ವಾರ ಕಲಾಪದಿಂದ ಅಮಾನತು ಮಾಡಲಾಗಿದೆ. ಅಧಿವೇಶನದ ವೇಳೆ ಬೆಲೆ ಏರಿಕೆ ಚರ್ಚೆಗೆ ಆಗ್ರಹಿಸಿ ಸಭಾಪತಿ ಪೀಠದ ಎದುರು ನಾಮಫಲಕ ಪ್ರದರ್ಶನ ಮಾಡಿದ್ದರು. ಬಳಿಕ ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಪಡಿಸಿ ಸಭಾಧ್ಯಕ್ಷರ ಎಚ್ಚರಿಕೆಯನ್ನೂ ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿದ್ದರು.
ಟಿಎಂಸಿ ಸಂಸದರಾದ ಸುಶ್ಮಿತಾ ದೇವ್, ಡಾ ಸಂತಾನು ಸೇನ್ ಮತ್ತು ಡೋಲಾ ಸೇನ್ ಸೇರಿದಂತೆ ಹಲವು ಸಂಸದರನ್ನು ವಾರದ ಉಳಿದ ಅವಧಿಗೆ ಸಭಾಪತಿ ಅಮಾನತುಗೊಳಿಸಿದ್ದಾರೆ. ಇನ್ನುಳಿದಂತೆ ಟಿಎಂಸಿ ಸಂಸದರಾದ ಮೌಸಂ ನೂರ್, ಶಾಂತ ಚೇಟ್ರಿ, ನದಿಮುಲ್ ಹಖ್, ಅಬೀರ್ ರಂಜನ್ ಬಿಸ್ವಾಸ್, ಡಿಎಂಕೆ ಸಂಸದರಾದ ಕನಿಮೊಳಿ, ಎಂ. ಹಮಾಮೆದ್ ಅಬ್ದುಲ್ಲಾ, ಎಸ್. ಕಲ್ಯಾಣಸುಂದರಂ, ಆರ್, ಗಿರಾಜ್ಜನ್, ಎನ್,ಆರ್ ಇಳಂಗೋ, ಎಂ ಷನ್ಮುಗಮ್, ಎನ್ವಿಎನ್ ಸೋಮು, ಸಿಪಿಐ(ಎಂ)ನ ಎಎ ರಹೀಂ, ವಿ. ಶಿವದಸನ್, ಸಿಪಿಐನ ಸಂತೋಷ್ ಕುಮಾರ್, ಟಿಆರ್ ಎಸ್ ನ ಲಿಂಗಯ್ಯ ಯಾದವ್, ರವೀಂದ್ರ ವಾದಿರಾಜ್, ದಾಮೋದರ್ ರಾವ್ ದಿವಕೊಂಡ ಅಮಾನತುಗೊಂಡ ಸಂಸದರು.